ರೂಪಾಯಿ ಮೌಲ್ಯ ಕುಸಿದಿಲ್ಲ, ಡಾಲರ್‌ ಮೌಲ್ಯ ಚಂಚಲತೆಯಲ್ಲಿದೆ: ನಿರ್ಮಲಾ ಸೀತಾರಾಮನ್‌

Update: 2022-08-02 17:09 GMT

ಹೊಸದಿಲ್ಲಿ,ಆ.2:ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿದಿಲ್ಲ.ವಾಸ್ತವವಾಗಿ ಅದು ಅದರ ಸಹಜ ಗತಿಯಲ್ಲೇ ಸಾಗುತ್ತಿದೆೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಇತರ ಹಲವಾರು ದೇಶಗಳ ಕರೆನ್ಸಿಗಳಿಗೆ ಹೋಲಿಸಿದರೆ ಡಾಲರ್ನೆದುರು ರೂಪಾಯಿಯ ಸಾಧನೆ ಉತ್ತಮವಾಗಿದೆ ಎಂದರು.  ಪ್ರತಿ ಡಾಲರ್ಗೆ 80 ರೂ. ಆಗುವ ಮೂಲಕ ರೂಪಾಯಿ ಮೌಲ್ಯವು ಪ್ರಪ್ರಥಮ ಬಾರಿಗೆ ದಾಖಲೆಯ ಕುಸಿತವನ್ನು ಕಂಡಿರುವುದನ್ನು ಪ್ರಸ್ತಾಪಿಸಿದ ಅವರು ರೂಪಾಯಿ ಮೌಲ್ಯದಲ್ಲಿನ ಸ್ಥಿತ್ಯಂತರಗಳಿಗೆ ಡಾಲರ್ ಮೌಲ್ಯದ ಚಂಚಲತೆಯೇ ಕಾರಣವಾಗಿದೆ ಎಂದವರು ತಿಳಿಸಿದರು.

  ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಕ್ರಮಣಕಾರಿಯಾದ ರೀತಿಯಲ್ಲಿ ಬಡ್ಡಿದರಗಳನ್ನು ಏರಿಕೆ ಮಾಡಿದುದೇ ಡಾಲರ್ ಮೌಲ್ಯವನ್ನು ಬಹುದಶಕಗಳಲ್ಲೇ ಗರಿಷ್ಠ ಎತ್ತರಕ್ಕೆ ಒಯ್ದಿದೆ ಎಂದು ನಿರ್ಮಲಾ ತಿಳಿಸಿದರು. ಇತರ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯವು ಈಗ ಏರುತ್ತಾ ಹೋಗುತ್ತಿದೆ ಎಂದು ವಿತ್ತ ಸಚಿವೆ ಸದನಕ್ಕೆ ತಿಳಿಸಿದರು. ರೂಪಾಯಿನೆದುರು ಡಾಲರ್ ಮೌಲ್ಯದ ಏರಿಕೆಯ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾದ ನಿಗಾವಿರಿಸಿದೆ ಹಾಗೂ ಒಂದು ವೇಳೆ ಈ ಅಸ್ಥಿರತೆಯು ತೀವ್ರವಾಗಿದ್ದಲ್ಲಿ ಮಾತ್ರವೇ ಅದು ಮಧ್ಯಪ್ರವೇಶಿಸಲಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News