ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಫಲಾನುಭವಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರಿಂದ ಚೆಕ್ ವಿತರಣೆ

Update: 2022-08-04 13:53 GMT

ಬಂಟ್ವಾಳ, ಆ. 4: ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯ ಮೂಲಕ ಬಂಟ್ವಾಳ ತಾಲೂಕಿನ ಫಲಾನುಭವಿಗಳಿಗೆ ಪ್ರಥಮ ಕಂತಿನಲ್ಲಿ 307 ಮಂದಿಗೆ 61.40 ಲಕ್ಷ ರೂಪಾಯಿ ಹಾಗೂ 1ನೇ ಕಂತಿನಲ್ಲಿ 644 ಜನರಿಗೆ 1.28 ಕೋಟಿ ರೂಪಾಯಿ ಹಣ ಮಂಜೂರಾಗಿದ್ದು ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ತಲಾ 20 ಸಾವಿರ ರೂ. ಜಮೆಯಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು. 

ಅವರು ಗುರುವಾರ ಶಾಸಕರ ಕಚೇರಿಯಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. 

ತಾಲೂಕಿನ ಒಟ್ಟು 951 ಮಂದಿಗೆ 1.90 ಕೋಟಿ ರೂ. ಮಂಜೂರಾಗಿರುತ್ತದೆ. ಹಿಂದೆ ಚೆಕ್‌ಗಳ ಮೂಲಕ ಮೊತ್ತವನ್ನು ನೀಡಲಾಗುತ್ತಿದ್ದು ಪ್ರಸಕ್ತ ಅದನ್ನು ನೇರವಾಗಿ ಬ್ಯಾಂಕಿಗೆ ಜಮೆ ಮಾಡಲಾಗುತ್ತದೆ. ಬಹಳ ಸಮಯದಿಂದ ಬಾಕಿ ಇದ್ದ ಅಂತ್ಯಸಂಸ್ಕಾರ ಸಹಾಯಧನ ಮೊತ್ತ ಕೂಡ ಬಿಡುಗಡೆಯಾಗಿದ್ದು ಒಟ್ಟು 379 ತಲಾ 5 ಸಾವಿರ ರೂಪಾಯಿ ಗಳಂತೆ 18.95 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದರು.

ತಹಶೀಲ್ದಾರ್ ಡಾ. ಸ್ಮಿತಾ ರಾಮು, ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಅನಂತಾಡಿ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ, ಮಾಜಿ ಅಧ್ಯಕ್ಷ ಸನತ್‌ಕುಮಾರ್ ರೈ, ಬರಿಮಾರು ಪಂಚಾಯತ್ ಉಪಾಧ್ಯಕ್ಷ ಸದಾಶಿವ ಬರಿಮಾರು, ಪಂಜಿಕಲ್ಲು ಗ್ರಾಪಂ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಗಣೇಶ್ ರೈ ಮಾಣಿ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ನಾಗೇಶ್ ಭಂಡಾರಿ ಕರಿಂಕ, ಸದಾನಂದ ನಾವೂರು, ಸುರೇಶ್ ಕೋಟ್ಯಾನ್ ಮೊದಲಾದವರಿದ್ದರು.

ತಾಲೂಕು ಕೇಂದ್ರ ಸ್ಥಾನೀಯ ಶಿರಸ್ತೆದಾರ್ ನರೇಂದ್ರನಾಥ ಮಿತ್ತೂರು ಫಲಾನುಭವಿಗಳ ವಿವರ ನೀಡಿದರು. ಕಂದಾಯ ನಿರೀಕ್ಷಕರಾದ ವಿಜಯ ಆರ್., ಸಂತೋಷ್, ಪ್ರಶಾಂತ್ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿಗಳಾದ ವಂದನಾ, ಅಶ್ವಿನಿ, ಸ್ವಾತಿ, ಚೆನ್ನಬಸವ ಅಲ್ಲವಗೋಲ, ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News