ಮೈ ಕಮ್ಯುನಿಟಿ ಫೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗಾಗಿ ನಿರ್ಮಿಸಲಾದ 10 ಮನೆಗಳ ಉದ್ಘಾಟನೆ

Update: 2022-08-04 15:47 GMT

ಮಂಜೇಶ್ವರ: ಮೈ ಕಮ್ಯುನಿಟಿ ಫೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ 10 ಕುಟುಂಬಗಳಿಗೆ ನಿರ್ಮಿಸಲಾದ 10 ಮನೆಗಳ ಉದ್ಘಾಟನೆಯನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಕೋವಿಡ್ ಕಾಲದಲ್ಲಿ ಜಾತಿ ಮತ ನೋಡದೆ ಎಲ್ಲರನ್ನು ಮನುಷ್ಯ ಜಾತಿಯೆಂದು ಗುರುತಿಸಿ ಕಿಟ್ ಗಳನ್ನು ವಿತರಿಸಿ ಇತರರಿಗೆ ಮಾದರಿಯಾದ ಸಂಘಟನೆಯಾಗಿದೆ ಮೈ ಕಮ್ಯುನಿಟಿ ಫೌಂಡೇಶನ್ ಎಂದು ಹೇಳಿ, ಸಂಘಟನೆಯ ಟ್ರಸ್ಟಿಗಳನ್ನು ಅಭಿನಂದಿಸಿದರು.

ಮೈ ಕಮ್ಯುನಿಟಿ ಫೌಂಡೇಶನ್ ಚೇಯರ್ ಮ್ಯಾನ್  ಅಶ್ರಫ್ ಅಬ್ಬಾಸ್  ಅಧ್ಯಕ್ಷತೆ ವಹಿಸಿದರು. ಮೈ ಕಮ್ಯುನಿಟಿ ಕೋಶಾಧಿಕಾರಿ ಅಮೀರ್ ಅಬ್ಬಾಸ್ ಸಂಸ್ಥೆಯ ಬಗ್ಗೆ  ಪರಿಚಯ ನೀಡಿ ನಂತರ ಸ್ವಾಗತಿಸಿದರು.

ಈ ಸಂದರ್ಭ ಕುಂಜತ್ತೂರು ಖತೀಬ್ ಹಾಶಿರ್ ಹಾಮಿದಿ, ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ರಘು ಶೆಟ್ಟಿ, ಡಾ. ಖಾದರ್, ಅಬ್ದಲ್ ರಹ್ಮಾನ್ ಅರಿಮಲ, ಬಾವ ಹಾಜಿ, ಮಂಜೇಶ್ವರ ಬ್ಲಾಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ಬ್ಲಾಕ್ ಪಂ. ಸದಸ್ಯೆ ಸಫಾ ಫಾರೂಕ್, ಜೋಸೆಫ್ ಕ್ರಾಸ್ತಾ ಮೊದಲಾದವರು ಮಾತನಾಡಿದರು.

ಮೈ ಕಮ್ಯುನಿಟಿ   ಕಾರ್ಯದರ್ಶಿ ಇಸ್ಮಾಯಿಲ್ ಎಂಪಿ , ವೈಸ್ ಚೇಯರ್ ಮ್ಯಾನ್ ಅನ್ಸಾರ್ ತಂಙಳ್, ಪ್ರಧಾನ ಕಾರ್ಯದರ್ಶಿ ಮೊಯಿದಿನ್ ಕುಂಞಿ, ಟ್ರಸ್ಟಿಗಳಾದ ಫಾರೂಕ್,  ಉಸ್ಮಾನ್,  ಇಕ್ಬಾಲ್ ಸೇರಿದಂತೆ  ಹಲವು ಮಂದಿ ಉಪಸ್ಥರಿದ್ದರು.

ಸಮಾಜ ಸೇವೆಯಲ್ಲಿ ನಿರತರಾದವರಿಗೆ ವೇದಿಕೆಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News