ಫಾಝಿಲ್ ಹತ್ಯೆ ಬಗ್ಗೆ ಪ್ರಚೋದನಕಾರಿ ಪೋಸ್ಟ್: ಬೈಂದೂರು ಯುವಕನ ವಿರುದ್ಧ ಪ್ರಕರಣ ದಾಖಲು
Update: 2022-08-04 21:38 IST
ಉಡುಪಿ, ಆ.4: ಸುರತ್ಕಲ್‌ನ ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳ ಫೋಟೋ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಬೈಂದೂರಿನ ಯುವಕನೋರ್ವನ ಮೇಲೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀಕಾಂತ ಬೈಂದೂರು ಎಂಬ ಫೇಸ್‌ಬುಕ್ ಖಾತೆದಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತೀವ್ರ ತನಿಖೆ ನಡೆಸುತಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಮಾಹಿತಿಗಳು ಪೊಲೀಸ್ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಲಕ್ಷ್ಮೀಕಾಂತ ಬೈಂದೂರು ಎಂಬ ಫೇಸ್‌ಬುಕ್ ಖಾತೆಯಲ್ಲಿ ಫಾಝಿಲ್ ಕೊಲೆ ಆರೋಪಿಗಳ ಫೋಟೋ ಬಳಸಿ ಪ್ರಚೋದನಾಕಾರಿ ಹಾಗೂ ಕೋಮು ಪ್ರಚೋದನೆ ಪೋಸ್ಟ್‌ನ್ನು ಹರಿಯಬಿಟ್ಟಿರುವುದು ಕಂಡುಬಂದಿದ್ದು ಈತನ ವಿರುದ್ಧ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆಯೂ ಈತನ ವಿರುದ್ಧ ಕೇಸು ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಇದೀಗ ಈ ಬಗ್ಗೆಯೂ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.