ಭಾರತ ನಮ್ಮ ನಿಕಟ ಪಾಲುದಾರ: ಅಮೆರಿಕ

Update: 2022-08-04 17:01 GMT

ನೋಮ್ ಪೆನ್ಹ್(ಕಾಂಬೋಡಿಯಾ), ಆ.4: ನಮ್ಮ ಅತ್ಯಂತ ನಿಕಟ ಪಾಲುದಾರರಲ್ಲಿ ಭಾರತವೂ ಒಂದಾಗಿದ್ದು , ನನ್ನ ದೀರ್ಘಕಾಲದ ಸ್ನೇಹಿತ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್‌ರನ್ನು ಭೇಟಿಯಾಗಿ ವಿವಿಧ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಲು ಆಸಿಯಾನ್ ಸಭೆ ಸೂಕ್ತ ವೇದಿಕೆ ಒದಗಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.

ಕಾಂಬೋಡಿಯಾದಲ್ಲಿ ನಡೆಯುತ್ತಿರುವ ಆಸಿಯಾನ್ ದೇಶಗಳ ವಿದೇಶ ಸಚಿವರ ಸಭೆಯ ನೇಪಥ್ಯದಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ರನ್ನು ಭೇಟಿಯಾದ ಬ್ಲಿಂಕೆನ್, ಪರಸ್ಪರ ಹಿತಾಸಕ್ತಿಯ ವಿಷಯ, ಶ್ರೀಲಂಕಾದ ಬಿಕ್ಕಟ್ಟು, ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವಾತಾವರಣ ನಿರ್ಮಾಣ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.

ನಾವಿಬ್ಬರೂ ಆಸಿಯಾನ್ ಕೇಂದ್ರೀಕರಣದ ಪ್ರಬಲ ಪ್ರತಿಪಾದಕರು. ಉಚಿತ ಮತ್ತು ಮುಕ್ತ ಇಂಡೊ-ಪೆಸಿಫಿಕ್‌ಗಾಗಿ ನಾವು ಇಬ್ಬರೂ ಏಕರೀತಿಯ ಅಭಿಪ್ರಾಯ ಹಂಚಿಕೊಂಡಿದ್ದೇವೆ. ಶ್ರೀಲಂಕಾ, ಬರ್ಮಾ ಹಾಗೂ ಇತರ ಕೆಲವು ಹಾಟ್‌ಸ್ಪಾಟ್‌ಗಳಲ್ಲಿನ ಪರಿಸ್ಥಿತಿ ಸೇರಿದಂತೆ ಇಬ್ಬರ ಆತಂಕಕ್ಕೂ ಕಾರಣವಾದ ಹಲವು ತಕ್ಷಣದ ಸವಾಲುಗಳು ನಮ್ಮೆದುರಿದೆ. ಇದರ ಬಗ್ಗೆ ಚರ್ಚೆ ನಡೆಸಿ ಬಳಿಕ ಆಸಿಯಾನ್ ಸಭೆಗೆ ತೆರಳಲಿದ್ದೇವೆ’ ಎಂದು ಬ್ಲಿಂಕೆನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News