ಪೆಲೋಸಿ ತೈವಾನ್ ಭೇಟಿ ಭಾವೋನ್ಮತ್ತ, ವಿಚಾರಹೀನ ನಡೆ : ಚೀನಾ

Update: 2022-08-04 17:32 GMT

ಬೀಜಿಂಗ್, ಆ.4: ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿ ತೆರಳಿರುವುದಕ್ಕೆ ತೀವ್ರ ಆಕ್ರೋಶಗೊಂಡಿರುವ ಚೀನಾ, ತೈವಾನ್ ಸುತ್ತಮುತ್ತ ಸಮರಾಭ್ಯಾಸ ತೀವ್ರಗೊಳಿಸಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ಸಚಿವ ವಾಂಗ್ ಯಿ, ಪೆಲೋಸಿ ಭೇಟಿಯು ಅಮೆರಿಕದ ಬೇಜವಾಬ್ದಾರಿಯುತ, ಭಾವೋನ್ಮತ್ತ ಮತ್ತು ವಿಚಾರಹೀನ ನಡೆಯಾಗಿದೆ ಎಂದು ಟೀಕಿಸಿದ್ದಾರೆ. ಕಾಂಬೋಡಿಯಾದಲ್ಲಿ ನಡೆದ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಾಂಗ್ , ಈ ಬಿಕ್ಕಟ್ಟನ್ನು ದೂರಗೊಳಿಸಲು ಚೀನಾ ರಾಜತಾಂತ್ರಿಕ ಮಾರ್ಗದ ಮೂಲಕ ಗರಿಷ್ಟ ಪ್ರಯತ್ನ ನಡೆಸಿದೆ. ತನ್ನ ಪ್ರಮುಖ ಹಿತಾಸಕ್ತಿಗೆ ಘಾಸಿಯಾಗಲು ಎಂದಿಗೂ ಚೀನಾ ಅವಕಾಶ ನೀಡುವುದಿಲ್ಲ ಎಂದರು.

 ಚೀನಾದ ಪ್ರಸ್ತುತ ಮತ್ತು ಭವಿಷ್ಯದ ಕ್ರಮಗಳು ಎಚ್ಚರಿಕೆಯಿಂದ ಪರಿಗಣಿಸಿದ ಹಾಗೂ ವಿಶ್ಲೇಷಿಸಿದ ಅಗತ್ಯ ಮತ್ತು ಸಮಯೋಚಿತ ರಕ್ಷಣಾತ್ಮಕ ಪ್ರತಿಕ್ರಮಗಳಾಗಿವೆ. ಅಂತರಾಷ್ಟ್ರೀಯ ಮತ್ತು ದೇಶೀಯ ಕಾನೂನಿಗೆ ಅನುಗುಣವಾಗಿ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ’ ಎಂದು ವಾಂಗ್‌ಯಿ ಹೇಳಿಕೆಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News