ಚೀನಾದಲ್ಲಿ ಡೈನಾಸಾರ್‌ಗಳ 4,300 ಹೆಜ್ಜೆ ಗುರುತು ಪತ್ತೆ : ವರದಿ

Update: 2022-08-04 18:13 GMT
Photo credit: Weibo

 ಬೀಜಿಂಗ್, ಆ.4: ಉತ್ತರ ಚೀನಾದ ಝಾಂಗ್‌ಜಿಯಾಕು ನಗರದ ಹೆಬೈ ಪ್ರಾಂತದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಡೈನಾಸಾರ್‌ಗಳ ಹೆಜ್ಜೆಗುರುತು ಪಳೆಯುಳಿಕೆಗಳನ್ನು ಪತ್ತೆಹಚ್ಚಲಾಗಿದೆ ಎಂದು ವಿಜ್ಞಾನಿಗಳು ಘೋಷಿಸಿದ್ದಾರೆ. ಸುಮಾರು 150 ಮಿಲಿಯನ್ ವರ್ಷಗಳ ಹಿಂದಿನ, ಜುರಾಸಿಕ್ ಮತ್ತು ಕ್ರೆಟೇಷಿಯಸ್ ಅವಧಿಗೆ ಸೇರಿದ ಡೈನಾಸಾರ್‌ಗಳ ಒಟ್ಟು 4,300 ಹೆಜ್ಜೆಗುರುತುಗಳು ಪತ್ತೆಯಾಗಿದ್ದು 9000 ಚದರ ಮೀಟರ್ ಗಾತ್ರದಲ್ಲಿವೆ ಎಂದು ವಿಜ್ಞಾನಿಗಳನ್ನು ಉಲ್ಲೇಖಿಸಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಹೆಜ್ಜೆಗುರುತಿನ ಪಳೆಯುಳಿಕೆಯಲ್ಲಿ ಪಂಜದ ಗುರುತೂ ಮೂಡಿದ್ದು ಇವು 2020ರ ಎಪ್ರಿಲ್‌ನಲ್ಲಿ ಮೊದಲು ಪತ್ತೆಯಾದ ಬಳಿಕ ಅವನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ. ಹೆಜ್ಜೆಗುರುತುಗಳ ಆಧಾರದಲ್ಲಿ ಡೈನಾಸಾರ್‌ಗಳ ಉದ್ದ, ತೂಕ ಮತ್ತು ಗಾತ್ರವನ್ನು ವಿಜ್ಞಾನಿಗಳು ಲೆಕ್ಕಹಾಕಬಹುದು. ಜತೆಗೆ, ಈ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಅಸ್ತಿತ್ವದ ಬಗ್ಗೆ ಕುತೂಹಲಕಾರಿ ಸುಳಿವುಗಳನ್ನು ಸಹ ಬಹಿರಂಗಪಡಿಸಬಹುದು. ಹೆಜ್ಜೆಗುರುತುಗಳು ಡೈನಾಸಾರ್‌ನ ಜೀವನ ಪದ್ಧತಿ ಮತ್ತು ನಡವಳಿಕೆಯಷ್ಟೇ ಅಲ್ಲ, ಆ ಸಮಯದಲ್ಲಿ ಡೈನಾಸಾರ್ ಮತ್ತು ವಾಸಿಸುವ ಪರಿಸರದ ನಡುವಿನ ಸಂಬಂಧವನ್ನೂ ಸೂಚಿಸುತ್ತದೆ ಎಂದು ಚೀನಾದ ಭೂವಿಜ್ಞಾನ ವಿವಿಯ ಡೈನಸಾರ್ ತಜ್ಞ ಕ್ಸಿಂಗ್ ಲಿಡಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News