ರಾಜಪಕ್ಸ ಸಿಂಗಾಪುರ ವಾಸ್ತವ್ಯ ಇನ್ನೆರಡು ವಾರ ವಿಸ್ತರಣೆ

Update: 2022-08-06 15:26 GMT
photo : twitter

ಕೊಲಂಬೋ, ಆ.6: ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸ ವಾಸ್ತವ್ಯಕ್ಕೆ ಇನ್ನೂ 14 ದಿನ ಅವಕಾಶ ನೀಡುವಂತೆ ಶ್ರೀಲಂಕಾ ಸರಕಾರ ಸಿಂಗಾಪುರಕ್ಕೆ ಕೋರಿಕೆ ಸಲ್ಲಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

   

ಗೊತಬಯ ಸಿಂಗಾಪುರದಲ್ಲಿ ಉಳಿದುಕೊಳ್ಳುವ ವೀಸಾ ಅವಧಿ ಆಗಸ್ಟ್ 11ರಂದು ಮುಕ್ತಾಯಗೊಳ್ಳಲಿದೆ. ಆದರೆ, ಇದೀಗ ಶ್ರೀಲಂಕಾ ಸರಕಾರದ ಕೋರಿಕೆಯಂತೆ ಅವರು ಇನ್ನೂ ಕೆಲ ಸಮಯ ಅಲ್ಲಿ ನೆಲೆಸಲಿದ್ದಾರೆ ಎಂದು ‘ಡೈಲಿ ಮಿರರ್’ ವರದಿ ಮಾಡಿದೆ. ಜುಲೈ 14ರಂದು ಮಾಲ್ದೀವ್ಸ್ನಿಂದ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಗೊತಬಯಗೆ 14 ದಿನದ ಸಂದರ್ಶನ ಪಾಸ್ ಒದಗಿಸಲಾಗಿತ್ತು ಮತ್ತು 2 ವಾರ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿತ್ತು.

ಗೊತಬಯ ರಾಜೀನಾಮೆಗೆ ಆಗ್ರಹಿಸುತ್ತಿದ್ದ ಶ್ರೀಲಂಕಾದ ಪ್ರತಿಭಟನಾಕಾರರು ಜುಲೈ 9ರಂದು ಕೊಲಂಬೊದಲ್ಲಿನ ಸರಕಾರಿ ನಿವಾಸಕ್ಕೆ ನುಗ್ಗಿದ್ದ ಹಿನ್ನೆಲೆಯಲ್ಲಿ ಗೊತಬಯ ಮಾಲ್ದೀವ್ಸ್ಗೆ ಪಲಾಯನ ಮಾಡಿದ್ದರು. ಅಲ್ಲಿಂದ ಸಿಂಗಾಪುರಕ್ಕೆ ತೆರಳಿದ್ದ ಗೊತಬಯ, ಜುಲೈ 15ರಂದು ಅಧ್ಯಕ್ಷ ಪದವಿಗೆ ರಾಜೀನಾಮೆ ಘೋಷಿಸಿದ್ದರು. ಜುಲೈ 21ರಂದು ರನಿಲ್ ವಿಕ್ರಮಸಿಂಘೆ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News