×
Ad

ಬಂಟ್ವಾಳ | ನೇತ್ರಾವತಿ ನದಿಗೆ ಆಕಸ್ಮಿಕವಾಗಿ ಬಿದ್ದು ಯುವಕ ನಾಪತ್ತೆ

Update: 2022-08-07 11:47 IST

ಬಂಟ್ವಾಳ, ಆ.7: ಕೆಲಸ ಮುಗಿಸಿ ಕೈಕಾಲು ತೊಳೆಯಲು ನೇತ್ರಾವತಿ ನದಿಗೆ ಇಳಿದ ಯುವಕನೋರ್ವ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದ ಘಟನೆ ಬಿ.ಸಿ.ರೋಡ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಛತ್ತೀಸ್ ಗಡ್ ರಾಜ್ಯ ದ ಬಸ್ತರ ಜಿಲ್ಲೆಯ ಬಡ್ಡೆಬಂದಮ ಗ್ರಾಮದ ಜಮ್ಮವಾಡ ನಿವಾಸಿ ಆನಂದ ಕಶ್ಯಪ (28) ನೀರುಪಾಲಾಗಿ ಕಾಣೆಯಾದ ವ್ಯಕ್ತಿ.

ಒಂದು ತಿಂಗಳಿನಿಂದ ಬಂಟ್ವಾಳ ರೈಲ್ವೆ ಸ್ಟೇಷನ್ ನ ಪಕ್ಕದಲ್ಲಿ ರೈಲ್ವೆ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಜೊತೆಯಲ್ಲಿ ಛತ್ತೀಸ್ ಗಡ್ ಮೂಲದ ಕೆಲಸಗಾರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಶನಿವಾರ ಸಂಜೆ ಆನಂದ ಕಶ್ಯಪ ಕೆಲಸ ಮುಗಿಸಿ ಬಳಿಕ ಅಲ್ಲೇ ಸಮೀಪ ನೇತ್ರಾವತಿ ನದಿಗೆ ಕೈಕಾಲು ತೊಳೆಯಲು ನೀರಿಗಿಳಿದರೆನ್ನಲಾಗಿದೆ. ಈ ವೇಳೆ ಆಯತಪ್ಪಿ ನದಿಗೆ ಬಿದ್ದು ಕಾಣೆಯಾಗಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಅದರಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನಂದ್ ಗಾಗಿ ಶೋಧ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News