ಜಾಮಿಅ ಮದೀನತುನ್ನೂರ್ ದ್ವಿದಿನ ಸಾಹಿತ್ಯ ಕಮ್ಮಟಕ್ಕೆ ಸಮಾಪ್ತಿ

Update: 2022-08-07 09:59 GMT

ಕಲ್ಲಿಕೋಟೆ: ಜಾಮಿಅ ಮದೀನತುನ್ನೂರ್ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಇದರ ಕನ್ನಡ ಸಮಿತಿಯು ಹಮ್ಮಿಕೊಂಡ 'ನವೋದಯ' ಕನ್ನಡ ಸಾಹಿತ್ಯ ಕಮ್ಮಟವು ಆಗಸ್ಟ್ 4, 5 ರಂದು ಪೂನೂರು ಮರ್ಕಝ್ ಗಾರ್ಡನ್ ಸಂಸ್ಥೆಯಲ್ಲಿ ಜರಗಿತು. ಜಾಮಿಅ ಪ್ರೋ ರೆಕ್ಟರ್ ಆಸಫ್ ನೂರಾನಿ ಉದ್ಘಾಟಿಸಿದರು. 'ಕನ್ನಡ ಸಾಹಿತ್ಯ ಮತ್ತು ಗತ ಮುಸ್ಲಿಮ್ ವಿದ್ವಾಂಸರ ಸಾಹಿತ್ಯಿಕ ಛಾಪು ಹಾಗೂ ಪ್ರಭೋಧಕರ ಅವಕಾಶಗಳು ಮತ್ತು ಸವಾಲುಗಳ' ಕುರಿತು ಡಾ. ಸಿ ಯಂ ಹನೀಫ್ ಅಮ್ಜದಿ ಬೆಳ್ಳಾರೆ ವಿಚಾರ ಮಂಡಿಸಿದರು. ಪತ್ರಕರ್ತ ಫೈಝ್ ವಿಟ್ಲ 'ಸಾಹಿತ್ಯ ಮತ್ತು ಮಾಧ್ಯಮ'ದ ಕುರಿತು ಚರ್ಚೆ ನಡೆಸಿದರು. 

ಜಾಮಿಅ ಮದೀನತುನ್ನೂರಿನ ವಿವಿಧ ಆಫ್ ಕ್ಯಾಂಪಸ್ ಗಳಲ್ಲಿ ಅಧ್ಯಯನ ನಡೆಸುತ್ತಿರುವ ಐವತ್ತರಷ್ಟು ಕನ್ನಡಿಗ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು. ಶಿಬಿರದ ಪ್ರಯುಕ್ತ ನಡೆದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಅನಸ್ ಅಸೈಗೋಳಿ (ದಾರುಲ್ ಖುರ್'ಆನ್ ಪೇರಾಂಬ್ರ), ಬಾಖಿರ್ ತಲಕ್ಕಿ (ದಲಾಇಲುಲ್ ಖೈರಾತ್ ಕಕ್ಕಿಡಿಪ್ಪುರಂ) ಹಾಗೂ ಹಾಫಿಝ್ ತೌಫೀಖ್ ಕಲ್ಕಟ್ಟ (ಮರ್ಕಝ್ ಸ್ವಹಾಬ ಕಾಡಾಚಿರ) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು. ಕನ್ನಡ ಸಮಿತಿ ಪದಾಧಿಕಾರಿಗಳಾದ ಹಾಫಿಝ್ ತ್ವಾಹಿರ್ ಅಲಿ ಸ್ವಾಗತ ಮತ್ತು ತಸ್ಲೀಂ ಮೊಂಟೆಪದವು ವಂದನೆಯನ್ನು ಕೋರಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News