ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ಸ್ಥಾಪಕ ಅಧ್ಯಕ್ಷ ಶೇಕ್ ಆದಂ ನಿಧನ; ಸಂತಾಪ ಸಭೆ

Update: 2022-08-08 11:20 GMT

ವಿಟ್ಲ : ಇಲ್ಲಿನ ಕೇಂದ್ರ ಜುಮಾ ಮಸೀದಿಯ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ಇದರ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶೇಕ್ ಆದಂ ನಿಧನಕ್ಕೆ ಸಂತಾಪ ಸಭೆಯು ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ  ಸೋಮವಾರ ನಡೆಯಿತು.

ಶಾಲೆಯ ಅಧ್ಯಕ್ಷ ಇಕ್ಬಾಲ್ ಹೋನೆಸ್ಟ್, ಸಂಚಾಲಕ  ಕೆ.ಅಬೂಬಕರ್ ನೋಟರಿ, ಆಡಳಿತ ಸಮಿತಿ ಸದಸ್ಯ ಮೊಹಮ್ಮದ್ ಇಕ್ಬಾಲ್ ಹಳೆಮನೆ, ಶಿಕ್ಷಕಿ ಚೇತನ, ಅರಬಿಕ್ ಶಿಕ್ಷಕ ಝಕರಿಯ, ಶಾಲಾ ಮುಖ್ಯೋಪಾಧ್ಯಾಯ ಮುನಾಝಿರ್ ಶೇಕ್ ಆದಂರ ಗುಣಗಾನ ಮಾಡಿದರು.

ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಗಪೂರ್, ಕಾರ್ಯದರ್ಶಿ ಮೊಹಮ್ಮದ್ ಇಕ್ಬಾಲ್, ಜತೆ ಕಾರ್ಯದರ್ಶಿ ಹನೀಫ್ ಎಂ.ಎ, ಸದಸ್ಯ ಅಂದುಂಞಿ ಗಮಿ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News