ಉಡುಪಿ ಜಿಲ್ಲಾ ರಜತ ಮಹೋತ್ಸವ ಲಾಂಛನ ವಿನ್ಯಾಸಕ್ಕೆ ಕರೆ

Update: 2022-08-08 16:21 GMT
ಸಾಂದರ್ಭಿಕ ಚಿತ್ರ

ಉಡುಪಿ, ಆ.8: ಉಡುಪಿ ಜಿಲ್ಲೆ ಪ್ರಾರಂಭಗೊಂಡು 25 ವರ್ಷಗಳಾ ಗುತ್ತಿರುವ ಹಿನ್ನೆಲೆಯಲ್ಲಿ, ರಜತ ಮಹೋತ್ಸವ ಕಾರ್ಯಕ್ರಮ ಆ.25ರಿಂದ ವಿವಿಧ ಹಂತಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಡಯಲಿದೆ.

ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸುಂದರವಾದ ಲಾಂಛನ ವನ್ನು, ಟ್ಯಾಗ್‌ಲೈನ್‌ನೊಂದಿಗೆ ರಚಿಸಿ, ಜಿಲ್ಲಾಡಳಿತಕ್ಕೆ  ನೀಡಲು  ಸಾರ್ವಜನಿಕ ರಿಂದ ಲಾಂಛನ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ. 

ಸಾರ್ವಜನಿಕರು ರಚಿಸಿದ ಅತ್ಯುತ್ತಮ ಒಂದು ಲಾಂಛನವನ್ನು ಆಯ್ಕೆ   ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಲಾಂಛನಕ್ಕೆ 10 ಸಾವಿರ ರೂ.ಗಳ ಬಹುಮಾನ ನೀಡಲಾಗುವುದು. ಲಾಂಛನವನ್ನು ಜಿಲ್ಲಾಧಿಕಾರಿ ಕಚೇರಿಯ ಈಮೇಲ್ ವಿಳಾಸ -dcudu-rd-ka@nic.in-ಕ್ಕೆ ಆಗಸ್ಟ್ 16ರೊಳಗೆ ಕಳುಹಿಸಿ ಕೊಡುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News