ಮಂಗಳೂರು | ಏಕಾಂಗಿಯಾಗಿ ದೇಶವ್ಯಾಪಿ 22,000 ಕಿ.ಮೀ. ಬೈಕ್ ಸವಾರಿ ಮಾಡಿದ ಅಮೃತಾ ಜೋಶಿ

Update: 2022-08-09 07:21 GMT

ಮಂಗಳೂರು, ಆ.9: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸವಿನೆನಪಿನಲ್ಲಿ ಕಾಸರಗೋಡು ಮೂಲದ, ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಶಿ ಏಕಾಂಗಿಯಾಗಿ ಬೈಕಿನಲ್ಲಿ ದೇಶ ಪರ್ಯಟನೆ ಮಾಡಿದ್ದಾರೆ.

ಮೂರು ತಿಂಗಳಲ್ಲಿ ಬೈಕಿನಲ್ಲಿ ಏಕಾಂಗಿಯಾಗಿ ದೇಶವ್ಯಾಪಿ ಸುಮಾರು 22 ಸಾವಿರ ಕಿ.ಮೀ. ಸಂಚರಿಸಿದ್ದಾರೆ. ಈ ವೇಳೆ ಬರ್ಮಾ, ಬಾಂಗ್ಲಾ, ನೇಪಾಳದ ಗಡಿಯಯಲ್ಲೂ ಸಂಚರಿಸಿದ ಅಮೃತಾ ಜೋಶಿ ಮುಗಿಸಿ ಆ.10ರಂದು ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 10:30ಕ್ಕೆ ಅವರನ್ನು ಕೆನರಾ ಅಸೋಸಿಯೇಶನ್ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News