ದೇರಳಕಟ್ಟೆ : ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ವತಿಯಿಂದ ಕ್ಯಾಂಪಸ್ ಮೀಟ್

Update: 2022-08-09 18:39 GMT

ಮಂಗಳೂರು: ಎಸ್ಕೆಎಸ್ಸೆಸ್ಸೆಫ್  ಕ್ಯಾಂಪಸ್ ವಿಂಗ್ ದೇರಳಕಟ್ಟೆ ವಲಯ ಸಮಿತಿ ವತಿಯಿಂದ ಕ್ಯಾಂಪಸ್ ಮೀಟ್ ಹಾಗೂ ನೂತನ ಸಮಿತಿ ರಚನಾ ಸಭೆಯು ಎಸ್ಕೆಎಸ್ಸೆಸ್ಸೆಫ್  ದೇರಳಕಟ್ಟೆ ವಲಯ ಸಮಿತಿ ಅಧ್ಯಕ್ಷ ಫಾರೂಖ್ ದಾರಿಮಿ ಗ್ರಾಮಚಾವಡಿ ಅವರ ಅಧ್ಯಕ್ಷತೆಯಲ್ಲಿ ದೇರಳಕಟ್ಟೆ ಎಸ್ಕೆಎಸ್ಸೆಸ್ಸೆಫ್    ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ಎಸ್ಕೆಎಸ್ಸೆಸ್ಸೆಫ್  ದ.ಕ ಜಿಲ್ಲಾ ಮಾಜಿ ಅಧ್ಯಕ್ಷ, ಬದ್ರಿಯಾ ಜುಮಾ ಮಸೀದಿ  ದೇರಳಕಟ್ಟೆ ಖತೀಬ್ ಇಸ್ಹಾಖ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದೇರಳಕಟ್ಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುರ್ರಹ್ಮಾನ್ ದಾರಿಮಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್  ದ.ಕ ವೆಸ್ಟ್ ಜಿಲ್ಲಾ ಸಮಿತಿ ಟ್ರೆಂಡ್ ಚೆಯರ್ಮ್ಯಾನ್ ಅಬ್ದುಲ್ ಸಮದ್ ಸಾಲೆತ್ತೂರ್ ಮುಖ್ಯ ಪ್ರಭಾಷಣಗೈದರು. ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್  ದೇರಳಕಟ್ಟೆ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ. ವರ್ಕಿಂಗ್ ಕಾರ್ಯದರ್ಶಿ ನೌಷಾದ್ ಮಲಾರ್. ಎಸ್ ಕೆ ಎಸ್ ಎಸ್ ಎಫ್ ಉಳ್ಳಾಲ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಹರ್ಷಾದ್ ದೇರಳಕಟ್ಟೆ. ಎಸ್ ಕೆ ಎಸ್ ಎಸ್ ಎಫ್ ವಿಖಾಯ ದೇರಳಕಟ್ಟೆ ವಲಯ ಕನ್ವೀನರ್ ಹನೀಫ್ ಮಲಾರ್. ಎಸ್ ಕೆ ಎಸ್ ಎಸ್ ಎಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷ ಫೈಝಲ್ ಡಿ.ಎಂ. ಪ್ರಧಾನ ಕಾರ್ಯದರ್ಶಿ ಮುಹಮ್ಮದ್  ಮುನ್ಶಿದ್, ರಫೀಕ್ ಕಿನ್ಯ ಮೊದಲಾದವರು ಉಪಸ್ಥಿತರಿದ್ದರು.
ಎಸ್ ಕೆ ಎಸ್ ಎಸ್ ಎಫ್ ಕ್ಯಾಂಪಸ್ ವಿಂಗ್ 
 ದೇರಳಕಟ್ಟೆ ವಲಯ ಕನ್ವೀನರ್ ಝುಲ್ಫಿಕರ್ ಅಲಿ ಸ್ವಾಗತಿಸಿ ಮುಝಮ್ಮಿಲ್ ಹೆಚ್ ಆರ್ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News