ರಾಣಿ ಅಬ್ಬಕ್ಕ ಕುರಿತು ಉಪನ್ಯಾಸ ಕಾರ್ಯಕ್ರಮ

Update: 2022-08-10 18:14 GMT

ಉಳ್ಳಾಲ: ಅಬ್ಬಕ್ಕಳ ವಿಷಯವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡುವುದು ನಮ್ಮ ಕೆಲಸ. ರಾಣಿ ಅಬ್ಬಕ್ಕ ಸ್ವಾತಂತ್ರ್ಯ ಹೋರಾಟ ದಲ್ಲಿ ಮುಂಚೂಣಿಯಲ್ಲಿ ಇದ್ದರು  ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ  ಹೇಳಿದರು

ಅವರು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅನುದಾನಿತ ಭಾರತ್ ಪ.ಪೂ.ಕಾಲೇಜು ಮಾಸ್ತಿಕಟ್ಟೆ ಇದರ ಸದುಪಯೋಗದಲ್ಲಿ  ಉಳ್ಳಾಲ ಭಾರತ್ ಪ.ಪೂ.ಕಾಲೇಜೀನಲ್ಲಿ ಬುಧವಾರ ನಡೆದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಪ್ರಯುಕ್ತ  ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಕುರಿತು  ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ವಿವಿ ರಾಣಿ ಅಬ್ಬಕ್ಕ ಪೀಠದ ಸಂಯೋಜಕ ಡಾ.ಗಣೇಶ್ ಸಂಕಮಾರ್  ಉಪನ್ಯಾಸ ನೀಡಿದರು. ಧನಲಕ್ಷ್ಮಿ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಗವೀರ ಸಂಘ ಉಳ್ಳಾಲ ಇದರ ಅಧ್ಯಕ್ಷ ಮನೋಜ್ ಸಾಲ್ಯಾನ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ದಲ್ಲಿ ಆನಂದ ಅಸೈಗೋಳಿ, ಜಯರಾಂ, ಜಯರಾಮ ಶೆಟ್ಟಿ, ಧನಲಕ್ಷ್ಮಿ ಗಟ್ಟಿ, ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಪಾಧ್ಯಕ್ಷ ಸದಾನಂದ ಬಂಗೇರ, ಸಂಚಾಲಕ  ರೋಹಿದಾಸ್ ಬಂಗೇರ, ಭಾರತ್ ಪಿ ಯು ಕಾಲೇಜು ಪ್ರಾಂಶುಪಾಲ ಕಲಾವತಿ ಭಾರತ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ವಿನಯ ಕುಮಾರಿ, ದೇವಕಿ ಉಳ್ಳಾಲ  ಮತ್ತಿತರರು ಉಪಸ್ಥಿತರಿದ್ದರು. ದಿನಕರ್ ಉಳ್ಳಾಲ ಸ್ವಾಗತಿಸಿದರು. ಅಬ್ದುಲ್ ಅಝೀಝ್ ಹಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News