×
Ad

ಯಕ್ಷಗಾನ ಕಲಾವಿದ ಸುಂದರ ಶೆಟ್ಟಿಗಾರ್ ನಿಧನ

Update: 2022-08-11 19:23 IST

ಉಡುಪಿ, ಆ.11: ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ ಮಾರ್ಪಳ್ಳಿ ಸುಂದರ ಶೆಟ್ಟಿಗಾರ್(77) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿರುವ ಮಗಳ ಮನೆಯಲ್ಲಿ ನಿಧನರಾದರು.

ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿ ಮತ್ತು ಶ್ರೀ ವೀರಭದ್ರ ಯಕ್ಷಗಾನ ಕಲಾಮಂಡಳಿ ಕಿನ್ನಿಮೂಲ್ಕಿ ಇದರ ಸ್ಥಾಪಕರಾಗಿದ್ದ ಇವರು, ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಹಿರಿಯ ಸದಸ್ಯರಾಗಿದ್ದರು. ತಾಳಮದ್ದಳೆ ಅರ್ಥಧಾರಿಯಾಗಿ ಜನಮನ್ನಣೆ ಪಡೆದಿದ್ದ ಇವರು ಸ್ವತಃ ವೇಷ ಧಾರಿಯಾಗಿ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಮೃತರು ಪತ್ನಿ ಶಾರದಾ, ನಾಲ್ವರು ಪುತ್ರಿರು, ಅಳಿಯಂದಿರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News