ಇಸಿಆರ್ ಇಸ್ಟಿಟ್ಯೂಟ್‌ನಲ್ಲಿ ಬಡ ವಿದ್ಯಾರ್ಥಿಗಳಿಗೆ ಶೇ.30 ಉಚಿತ ಸೀಟು

Update: 2022-08-11 15:23 GMT

ಉಡುಪಿ, ಆ.11: ಮಧುವನ ಇಸಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥೆಗೆ 12 ವರ್ಷ ತುಂಬಿದ ಪ್ರಯುಕ್ತ ಸಮಾಜದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿ ಕೊಳ್ಳಲಾಗಿದೆ. ಈ ಬಾರಿ ಶೇ.30ಸೀಟುಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಚೇರ್ಮನ್ ಹಾಗೂ ಸಂಸ್ಥಾಪಕ ಮಧು ಟಿ.ಭಾಸ್ಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಕಾಲೇಜಿನಲ್ಲಿರುವ ಬಿಬಿಎ, ಬಿಕಾಂ, ಏವಿಯೇಷನ್ ಹಾಸ್ಪಿಟಾಲಿಟಿ ಮ್ಯಾನೇ ಜ್ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಸೈಬರ್ ಸೆಕ್ಯೂರಿಟಿ ಕೋರ್ಸ್‌ಗಳಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇ.30 ಸೀಟುಗಳನ್ನು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಉಚಿತವಾಗಿ ನೀಡಲಾಗುವುದು ಎಂದರು.

ಕಾಲೇಜಿನಲ್ಲಿ ಒಟ್ಟು 360 ಸೀಟುಗಳ ಸಾಮರ್ಥ್ಯವಿದೆ. ಏವಿಯೇಷನ್‌ಗೆ ಸಂಬಂಧಿಸಿದ ತರಬೇತಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಈಗಾಗಲೇ 1200 ಮಂದಿ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದಾರೆ. ಈಗಾಗಲೇ ಶೇ.60-65 ಸೀಟುಗಳು ಭರ್ತಿಯಾಗಿವೆ. ಕೇರಳದ ಅಲೆಪ್ಪಿಯಲ್ಲಿ 12 ತರಬೇತಿ ಕೇಂದ್ರಗಳಿವೆ ಎಂದರು.

ಈ ಕಾಲೇಜು ಭಾರತದಲ್ಲಿಯೇ ಅತ್ಯಂತ ದೊಡ್ಡ ಏವಿಯೇಷನ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಭಾರತದಲ್ಲಿರುವ ಸರಕಾರದ ಎನ್‌ಎಸ್‌ಡಿಸಿ ಮಾನ್ಯತೆ ಪಡೆದ ಏಕೈಕ ಏವಿಯೇಷನ್ ಕಾಲೇಜು ಇದಾಗಿದೆ ಎಂದು ಇಸಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲ ಆಕಾಶ್ ಎಸ್. ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News