10,000 ನೌಕರರನ್ನು ವಜಾಗೊಳಿಸಿದ ಚೀನಾದ ದೈತ್ಯ ಸಂಸ್ಥೆ ಆಲಿಬಾಬಾ

Update: 2022-08-11 16:08 GMT
photo : twitter

ಬೀಜಿಂಗ್, ಆ.11: ಚೀನಾದ ಇ-ಕಾಮರ್ಸ್ ನ ದೈತ್ಯಸಂಸ್ಥೆ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಕಳೆದ 3 ತಿಂಗಳಲ್ಲಿ ಸುಮಾರು 10,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜೂನ್ನಲ್ಲಿ ಸಂಸ್ಥೆಯ ಆದಾಯದಲ್ಲಿ 50% ಇಳಿಕೆ ದಾಖಲಾದ ನಂತರದ ಬೆಳವಣಿಗೆಯಲ್ಲಿ , ವೆಚ್ಚ ಕಡಿತದ ಕ್ರಮವಾಗಿ ಸುಮಾರು 10,000 ನೌಕರರನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ಜೂನ್ಗೆ ಅಂತ್ಯವಾಗುವ ತ್ರೈಮಾಸಿಕ ಅವಧಿಯಲ್ಲಿ ಆಲಿಬಾಬಾ ಸಂಸ್ಥೆಯ ಆದಾಯ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 3.4 ಬಿಲಿಯನ್ ಡಾಲರ್ನಷ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ವೆಚ್ಚ ಕಡಿತ ಮಾಡಲು, 9.241ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಾಗಿದ್ದು ಈಗ ಸಂಸ್ಥೆಯಲ್ಲಿ ಸುಮಾರು 2,45,700 ಉದ್ಯೋಗಿಗಳಿದ್ದಾರೆ .

1999ರಲ್ಲಿ ಸ್ಥಾಪನೆಯಾದ ಆಲಿಬಾಬಾ ಸಂಸ್ಥೆಯ ಆಡಳಿತ ಮಂಡಳಿಯನ್ನು 2015ರಲ್ಲಿ ಪುನರ್ರಚಿಸಿದ ಬಳಿಕ ಸಂಸ್ಥೆಯ ಸ್ಥಾಪಕ ಜಾಕ್ ಮಾ, ಆಡಳಿತ ಚುಕ್ಕಾಣಿಯನ್ನು ನೂತನ ಸಿಇಒ ಡೇನಿಯಲ್ ಝಾಂಗ್ಗೆ ವಹಿಸಿದ್ದರು. ಝಾಂಗ್ 2019ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಆಲಿಬಾಬಾ ಸಂಸ್ಥೆಯ ಶೇರುಗಳನ್ನು 2014ರಲ್ಲಿ ಅಮೆರಿಕದ ಶೇರು ಮಾರುಕಟ್ಟೆಯಲ್ಲಿ ಮತ್ತು 2019ರಲ್ಲಿ ಹಾಂಕಾಂಗ್ ಶೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡಲಾಗಿದೆ. ಈ ಮೂಲಕ ಅಮೆರಿಕ ಮತ್ತು ಹಾಂಕಾಂಗ್ನಲ್ಲಿ ಪ್ರಾಥಮಿಕ ಲಿಸ್ಟಿಂಗ್ ಮಾಡಲಾಗಿರುವ ಪ್ರಪ್ರಥಮ ಬೃಹತ್ ಸಂಸ್ಥೆಯಾಗಿ ಆಲಿಬಾಬಾ ಗುರುತಿಸಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News