ಸಿಂಗಾಪುರದಿಂದ ಥೈಲ್ಯಾಂಡ್ ಗೆ ತೆರಳಿದ ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ರಾಜಪಕ್ಸ

Update: 2022-08-11 17:54 GMT

ಸಿಂಗಾಪುರ, ಆ.11: ಕಿರು ಅವಧಿಯ ಸಂದರ್ಶನ ಪಾಸ್ ನ ಮಾನ್ಯತೆ ಗುರುವಾರ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೊತಬಯ ರಾಜಪಕ್ಸ ಗುರುವಾರ ಸಿಂಗಾಪುರದಿಂದ ಥೈಲ್ಯಾಂಡ್ಗೆ ತೆರಳಿದ್ದಾರೆ ಎಂದು ವರದಿಯಾಗಿದೆ. 

ರಾಜಪಕ್ಸ ದೇಶಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ಶ್ರೀಲಂಕಾದ ಸರಕಾರದ ಕೋರಿಕೆಯನ್ನು ಮಾನ್ಯ ಮಾಡಿರುವುದಾಗಿ ಥೈಲ್ಯಾಂಡ್ ಘೋಷಿಸಿದ ಮರುದಿನ ರಾಜಪಕ್ಸ ಸಿಂಗಾಪುರದಿಂದ ಬ್ಯಾಂಕಾಕ್ ಗೆ ವಿಮಾನದ ಮೂಲಕ ತೆರಳಿದ್ದಾರೆ. ಮಾನವೀಯ ಕಾರಣಗಳಿಗಾಗಿ 73 ವರ್ಷದ ಶ್ರೀಲಂಕಾದ ಮಾಜಿ ಅಧ್ಯಕ್ಷರು ದೇಶಕ್ಕೆ ತಾತ್ಕಾಲಿಕ ಭೇಟಿಗೆ ಅವಕಾಶ ನೀಡಲಾಗಿದೆ. 

ಬೇರೊಂದು ದೇಶದಲ್ಲಿ ಶಾಶ್ವತ ಆಶ್ರಯ ಪಡೆಯುವವರೆಗೆ ಥೈಲ್ಯಾಂಡ್ನಲ್ಲಿ ತಾತ್ಕಾಲಿಕವಾಗಿ ಇರಲಿದ್ದು, ಈ ಸಂದರ್ಭ ಯಾವುದೇ ರಾಜಕೀಯ ಚಟುವಟಿಕೆ ನಡೆಸುವುದಿಲ್ಲ ಎಂದು ಗೊತಬಯ ವಾಗ್ದಾನ ನೀಡಿದ್ದಾರೆ ಎಂದು ಥೈಲ್ಯಾಂಡ್ನ ಪ್ರಧಾನಿ ಪ್ರಯೂತ್ ಚಾನ್-ಒ-ಚ ಹೇಳಿದ್ದಾರೆ. ರಾಜಪಕ್ಸ ಸಿಂಗಾಪುರದಿಂದ ತೆರಳಿರುವುದನ್ನು ಆ ದೇಶದ ವಲಸೆ ಮತ್ತು ಚೆಕ್ಪೋಸ್ಟ್ಗಳ ಪ್ರಾಧಿಕಾರ ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News