ಜಮ್ಮು-ಕಾಶ್ಮೀರದಲ್ಲಿ ವಲಸೆ ಕಾರ್ಮಿಕನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

Update: 2022-08-12 13:53 GMT
ಸಾಂದರ್ಭಿಕ ಚಿತ್ರ (PTI)

ಶ್ರೀನಗರ,ಆ.12: ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಭಯೋತ್ಪಾದಕರು ಬಿಹಾರದ ವಲಸೆ ಕಾರ್ಮಿಕನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಬಂಡಿಪೋರಾ ಜಿಲ್ಲೆಯ ಅಜಾಸ್ ಪ್ರದೇಶದಲ್ಲಿ ಗುರುವಾರ ಮಧ್ಯರಾತ್ರಿಯ ಸುಮಾರಿಗೆ ಈ ದಾಳಿ ನಡೆದಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಬಿಹಾರದ ಮಾಧೇಪುರ ನಿವಾಸಿ ಮುಹಮ್ಮದ್ ಅಮ್ರೇಝ್ನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ತಿಳಿಸಿದರು. ತನ್ನ ಬಳಿ ಹಣವಿಲ್ಲ,ಹೀಗಾಗಿ ಅಮ್ರೇಝ್ನ ಶವವನ್ನು ಹುಟ್ಟೂರಿಗೆ ಸಾಗಿಸಲು ನೆರವಾಗುವಂತೆ ಆತನ ಸೋದರ ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲ ಮನೋಜ ಸಿನ್ಹಾರನ್ನು ಆಗ್ರಹಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News