ರಚನಾ ಪ್ರಶಸ್ತಿ 2023: ನಾಮಪತ್ರ ಆಹ್ವಾನ

Update: 2022-08-12 10:41 GMT

ಮಂಗಳೂರು, ಆ.12: ಕೆಥೊಲಿಕ್‌ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರಿ-ರಚನಾ ವತಿಯಿಂದ ಮಂಗಳೂರು ಮೂಲದ ವಿವಿಧೆಡೆಗಳಲ್ಲಿ ಹಬ್ಬಿಕೊಂಡಿರುವ ಕೆಥೊಲಿಕ್‌ ಕ್ರೈಸ್ತ ಸಮುದಾಯದ, ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಿರುವ ಗಣ್ಯರನ್ನು ಪರಿಗಣಿಸಿ ರಚನಾ ಪ್ರಶಸ್ತಿ ನೀಡುತ್ತಿದ್ದು, 2023ನೇ ಸಾಲಿನ ಈ ಕೆಳಗಿನ ಪ್ರಶಸ್ತಿಗಳಿಗಾಗಿ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ರಾಜ್ಯದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕ

ರಚನಾ ಕೃಷಿಕ, ರಚನಾ ವೃತ್ತಿಪರ (ವೈದ್ಯರು, ವಕೀಲರು, ಇಂಜಿನಿಯರ್ಸ್‌, ಚಾರ್ಟರ್ಡ್‌ ಅಕೌಂಟೆಂಟ್ಸ್), ರಚನಾ ಉದ್ಯಮಿ, ರಚನಾ ಅನಿವಾಸಿ ಉದ್ಯಮಿ/ ವೃತ್ತಿಪರ ಹಾಗೂ ವಿಶೇಷ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ಬಿರುದು, ಸನ್ಮಾನ ಪತ್ರ, ಸ್ಮಾರಕ, ಸಾರ್ವಜನಿಕ ಸನ್ಮಾನವನ್ನು ಒಳಗೊಂಡಿರುವುದು. ಅರ್ಜಿ / ನಾಮಪತ್ರಗಳನ್ನು ಭಾವಚಿತ್ರದೊಂದಿಗೆ ಅಧ್ಯಕ್ಷರು, ರಚನಾ, ಮೊದಲ ಮಹಡಿ, ಪಿಯೊ ಮಾಲ್, ಜೈಲ್‌ ರಸ್ತೆ, ಮಂಗಳೂರು 575 004. ಇಮೇಲ್: rachanamangalore@gmail.com ಈ ವಿಳಾಸಕ್ಕೆ ಸೆಪ್ಟಂಬರ್ 30ರೊಳಗೆ ತಲುಪುವಂತೆ ಕಳುಹಿಸಲು ಕೋರಲಾಗಿದೆ.

25 ಮಂದಿ ಜ್ಯೂರಿ ಸದಸ್ಯರ ತಂಡವು ನಾಮಪತ್ರ ಅರ್ಜಿಗಳನ್ನು ಪರಿಶೀಲಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2023ರ ಜನವರಿ 15ರಂದು ಸಂಜೆ 6:30ಕ್ಕೆ ಮಿಲಾಗ್ರಿಸ್‌ ಜ್ಯುಬಿಲಿ ಸಭಾಭವನದಲ್ಲಿ ನಡೆಯಲಿದೆ. ಮಂಗಳೂರಿನ ಬಿಷಪ್ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ರಚನಾ ಪ್ರಶಸ್ತಿ ಬಗ್ಗೆ ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ರಚನಾ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ದೂ.ಸಂಖ್ಯೆ: 08242001188 / 9141269230 ಆಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News