ಇಂಗ್ಲೆಂಡ್‌ ನ ಹಲವು ಪ್ರದೇಶಗಳಲ್ಲಿ ʼಬರಗಾಲʼ: ಸರಕಾರದಿಂದ ಅಧಿಕೃತ ಘೋಷಣೆ

Update: 2022-08-12 12:11 GMT

ಲಂಡನ್: ಸುದೀರ್ಘ ಅವಧಿಯ ಬಿಸಿಗಾಳಿ ಮತ್ತು ಶುಷ್ಕ(ಒಣ) (Heat Wave) ಹವಾಮಾನದ ನಂತರ ದಕ್ಷಿಣ, ಮಧ್ಯ ಮತ್ತು ಪೂರ್ವ ಇಂಗ್ಲೆಂಡ್‌ನ (England) ಭಾಗಗಳು ಅಧಿಕೃತವಾಗಿ ಬರ ಸ್ಥಿತಿಗೆ ತೆರಳಿವೆ (Drought) ಎಂದು ಬ್ರಿಟಿಷ್ ಸರ್ಕಾರ ಶುಕ್ರವಾರ ಅಧಿಕೃತ ಹೇಳಿಕೆ ನೀಡಿದೆ.

1935 ರ ಬಳಿಕ ಇದೇ ಪ್ರಥಮ ಬಾರಿಗೆ ಇಂಗ್ಲೆಂಡ್ ಈ ರೀತಿಯ ʼಒಣ ತಿಂಗಳುʼ ಅನುಭವಿಸಿದೆ. ತಿಂಗಳ ಸರಾಸರಿ ಮಳೆಯ 35% ಮಾತ್ರವಾಗಿದ್ದು, ಇಂಗ್ಲೆಂಡ್ ಮತ್ತು ವೇಲ್ಸ್‌ನ ಕೆಲವು ಭಾಗಗಳು ಈಗ ನಾಲ್ಕು ದಿನಗಳ "ತೀವ್ರ ಶಾಖ" ಎಚ್ಚರಿಕೆಯಲ್ಲಿವೆ.

"ಎಲ್ಲಾ ನೀರಿನ ಕಂಪನಿಗಳು, ಅಗತ್ಯ ಸರಬರಾಜುಗಳು ಇನ್ನೂ ಸುರಕ್ಷಿತವಾಗಿವೆ ಎಂದು ನಮಗೆ ಭರವಸೆ ನೀಡಿವೆ" ಎಂದು ಜಲ ಸಚಿವ ಸ್ಟೀವ್ ಡಬಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಶುಷ್ಕ ಹವಾಮಾನದ ಅವಧಿಗಳಿಗೆ ನಾವು ಹಿಂದೆಂದಿಗಿಂತಲೂ ಉತ್ತಮವಾಗಿ ಸಿದ್ಧರಾಗಿದ್ದೇವೆ, ಆದರೆ ರೈತರು(Farmers) ಮತ್ತು ಪರಿಸರದ ಮೇಲೆ ಪರಿಣಾಮಗಳನ್ನು ಒಳಗೊಂಡಂತೆ ನಾವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಅಗತ್ಯವಿರುವಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ." ಎಂದು ಹೇಳಿದರು.

ಬರ ಪೀಡಿತ ಪ್ರದೇಶಗಳಲ್ಲಿನ ಸಾರ್ವಜನಿಕರು ಮತ್ತು ಇನ್ನಿತರರು ನೀರನ್ನು ಜಾಗರೂಕತೆಯಿಂದ ಬಳಸಬೇಕೆಂದು ಒತ್ತಾಯಿಸಲಾಗಿದೆ ಎಂದು ಸರ್ಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News