ಸಾಮಾಜಿಕ ಬದಲಾವಣೆಗೆ ಯುವಜನಾಂಗದ ನಾಯಕತ್ವ ಅಗತ್ಯ: ಯು.ಟಿ.ಖಾದರ್

Update: 2022-08-12 13:33 GMT

ಕೊಣಾಜೆ: ಸಾಮಾಜಿಕ ಬದಲಾವಣೆಗಳಿಗೆ ಯುವ ಸಮುದಾಯ ನಾಯಕತ್ವ ವಹಿಸುವಂತೆ ಶಾಸಕರಾದ ಯು.ಟಿ. ಖಾದರ್ ಕರೆ ನೀಡಿದರು.

ಅವರು ಶುಕ್ರವಾರ ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಶಿಕ್ಷಿತ ಯುವಜನರು ಸಮುದಾಯಗಳ ಅಭಿವೃದ್ಧಿಯಲ್ಲಿ ರಚನಾತ್ಮಕ ಪಾತ್ರ ವಹಿಸಬೇಕು, ಆ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದರು.

ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ  ಪ್ರಾಸ್ತಾವಿಕವಾಗಿ ಮಾತನಾಡಿ, ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ವಿವರಿಸಿದರು. 

ಯೆನೆಪೊಯ ಡಿಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ. ವಿಜಯ್ ಕುಮಾರ್, ರಿಜಿಸ್ಟ್ರಾರ್ ಡಾ. ಕೆ.ಎಸ್. ಗಂಗಾಧರ್ ಸೋಮಯ್ಯ ಜೆ, ಆನ್‍ಲೈನ್ ಮೂಲಕ ಶುಭಾಷಯ ಕೋರಿದರು.

ಹಿರಿಯ ಪತ್ರಕರ್ತ ನಂದಗೋಪಾಲ್ ಶ್ರೀನಿವಾಸನ್, ಮಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಸಿಂಗೆ, ಪೇಪರ್ ಸೀಡ್ ಸಂಸ್ಥೆಯ ಸಂಸ್ಥಾಪಕ ನಿತಿನ್ ವಾಸ್, ಮಂಗಳೂರು ಗ್ರೀನ್ ಬ್ರಿಗೇಡ್ ಹಾಗೂ ಪರಿಸರವಾದಿ ಜಿತ್ ಮಿಲನ್ ರೋಚ್, ಎನ್.ಎಸ್.ಎಸ್ ಸ್ವಯಂಸೇವಕ ಡಾ. ಸಿನಾನ್ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಯುವ ಸಮುದಾಯದೊಂದಿಗೆ ಸಂವಾದ ನಡೆಸಿದರು.

ಯೆನೆಪೊಯ ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜಕರಾದ ಅಶ್ವಿನಿ ಶೆಟ್ಟಿ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News