ಆಸ್ಟ್ರೇಲಿಯಾ: ಗೂಗಲ್ ಗೆ ೪೩ ಮಿಲಿಯನ್ ಡಾಲರ್ ದಂಡ

Update: 2022-08-12 16:25 GMT

ಸಿಡ್ನಿ, ಆ.೧೨: ಬಳಕೆದಾರರ ವೈಯಕ್ತಿಕ ಸ್ಥಳದ ಅಂಕಿಅಂಶದ ಬಗ್ಗೆ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ೪೨.೭ ಮಿಲಿಯನ್ ಡಾಲರ್ ದಂಡ ಪಾವತಿಸುವಂತೆ ಗೂಗಲ್ಗೆ ಆಸ್ಟ್ರೇಲಿಯಾದ ಫೆಡರಲ್ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ ಎಂದು ವರದಿಯಾಗಿದೆ. ೨೦೧೭ರ ಜನವರಿಯಿಂದ ೨೦೧೮ರ ಡಿಸೆಂಬರ್ ಅವಧಿಯಲ್ಲಿ ಬಳಕೆದಾರರ ಆಂಡ್ರಾಯ್ಡ್ ಮೊಬೈಲ್ ಸಾಧನದ ಮೂಲಕ ಸಂಗ್ರಹಿಸಿದ ವೈಯಕ್ತಿಕ ಸ್ಥಳ ಮಾಹಿತಿಯ ವಿಷಯದಲ್ಲಿ ಗೂಗಲ್ ಬಳಕೆದಾರರನ್ನು ತಪ್ಪು ದಾರಿಗೆ ಎಳೆದಿದೆ .

ಆಸ್ಟ್ರೇಲಿಯಾದ ಸುಮಾರು ೧.೩ ಮಿಲಿಯನ್ ಗೂಗಲ್ ಬಳಕೆದಾರರ ಮೇಲೆ ಇದು ಪರಿಣಾಮ  ಬೀರಿದೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ ಅಂಡ್ರಾಯ್ಡ್ ಫೋನ್ಗಳಲ್ಲಿರುವ `ಲೊಕೇಷನ್ ಹಿಸ್ಟರಿ' ಸೆಟ್ಟಿಂಗ್ ಮೂಲಕ ಮಾತ್ರವೇ ಬಳಕೆದಾರರ ಸ್ಥಳ ಮಾಹಿತಿಯನ್ನು ಸಂಗ್ರಹಿಸಬಹುದು ಎಂದು ಗೂಗಲ್ ಬಳಕೆದಾರರಿಗೆ ತಪ್ಪು ಮಾಹಿತಿ ನೀಡಿತ್ತು. ಆದರೆ ಮಾನಿಟರಿ ವೆಬ್ ಮತ್ತು ಅಪ್ಲಿಕೇಷನ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯ ಮೂಲಕವೂ ಈ ಅಂಕಿಅಂಶ ಸಂಗ್ರಹಿಸಲಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿರುವುದಾಗಿ `ಆಸ್ಟ್ರೇಲಿಯನ್ ಕಾಂಪಿಟೀಷನ್ ಆ್ಯಂಡ್ ಕನ್ಸ್ಯೂಮರ್ ಕಮಿಷನ್(ಎಸಿಸಿಸಿ) ಹೇಳಿದೆ. ಈ ವಿಷಯವನ್ನು ಇತ್ಯರ್ಥಪಡಿಸಲಾಗಿದೆ ಮತ್ತು ಸ್ಥಳದ ಮಾಹಿತಿಯನ್ನು  ಸರಳ ಮತ್ತು ಸುಲಭದಲ್ಲಿ ಅರ್ಥವಾಗುವ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ಗೂಗಲ್ ಪ್ರತಿಕ್ರಿಯಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News