ಮುಳುಗುತ್ತಿದ್ದ 9 ಭಾರತೀಯರನ್ನು ರಕ್ಷಿಸಿದ ಪಾಕಿಸ್ತಾನದ ನೌಕಾಪಡೆ

Update: 2022-08-12 18:07 GMT

ಕರಾಚಿ, ಆ.12: ಅರೇಬಿಯನ್ ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ನೌಕೆ ಮುಳುಗಿದ ಬಳಿಕ ನೀರುಪಾಲಾಗಿದ್ದ ಹಡಗಿನ 9 ಸಿಬಂದಿಗಳನ್ನು ರಕ್ಷಿಸಿರುವುದಾಗಿ ಪಾಕಿಸ್ತಾನದ ನೌಕಾಪಡೆ ಗುರುವಾರ ಹೇಳಿದೆ. ಬಲೋಚಿಸ್ತಾನ ಪ್ರಾಂತದ ಗ್ವದರ್ ಪಟ್ಟಣದಲ್ಲಿ ಆಗಸ್ಟ್ 9ರಂದು ಈ ಘಟನೆ ನಡೆದಿದೆ.

10 ಮಂದಿ ಸಿಬಂದಿಗಳಿದ್ದ ‘ಜಮ್ನಾ ಸಾಗರ್’ ನೌಕೆ ನೀರಿನಲ್ಲಿ ಮುಳುಗಿದೆ. ಈ ಬಗ್ಗೆ ಮಾಹಿತಿ ದೊರಕಿದ ತಕ್ಷಣ, ಅಲ್ಲಿಯೇ ಸನಿಹದಲ್ಲಿದ್ದ ವಾಣಿಜ್ಯ ನೌಕೆಗೆ ಅಗತ್ಯದ ನೆರವು ಒದಗಿಸಲು ಸೂಚಿಸಲಾಗಿದೆ ಎಂದು ಪಾಕಿಸ್ತಾನ ನೌಕಾಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕರು ಹೇಳಿದ್ದಾರೆ. ವಾಣಿಜ್ಯ ಹಡಗಿನವರು ಸಮುದ್ರಕ್ಕೆ ಬಿದ್ದಿದ್ದ 9 ಸಿಬಂದಿಗಳನ್ನು ರಕ್ಷಿಸಿದ್ದಾರೆ. ಅದೇ ಸಂದರ್ಭ ಪಾಕಿಸ್ತಾನದ ನೌಕಾಪಡೆಯ ಹಡಗು, 2 ಹೆಲಿಕಾಪ್ಟರ್ಗಳು ಕೂಡಾ ಈ ಪ್ರದೇಶಕ್ಕೆ ತಲುಪಿದ್ದು, ಹಡಗು ಮುಳುಗುತ್ತಿದ್ದ ಸಂದರ್ಭ ನಾಪತ್ತೆಯಾಗಿದ್ದ ಒಬ್ಬ ಸಿಬಂದಿಯ ಮೃತದೇಹವನ್ನು ಪತ್ತೆಹಚ್ಚಿದೆ. ಮೃತದೇಹವನ್ನು ಮುಂದಿನ ಕ್ರಮಕ್ಕಾಗಿ ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News