ಗುರುವಾಯನಕೆರೆ ಮಸೀದಿಯಲ್ಲಿ 'ಆಝಾದಿ ಎಕ್ಸ್ ಪೋ' ಉದ್ಘಾಟನೆ

Update: 2022-08-14 12:39 GMT

ಬೆಳ್ತಂಗಡಿ, ಆ.13: ದೇಶದ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗುರುವಾಯನಕೆರೆಯ ಹಝ್ರತ್ ಶೈಖ್‌ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮಾ ಮಸ್ಜಿದ್ ವತಿಯಿಂದ 'ಗಣರಾಜ್ಯ ರಕ್ಷಿಸಿ' ಅಭಿಯಾನದ ಪ್ರಯುಕ್ತ 'ಆಝಾದಿ ಎಕ್ಸ್ ಪೋ' ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆಝಾದಿ ಎಕ್ಸ್ ಪೋ'ವನ್ನು ಅಸ್ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಉದ್ಘಾಟಿಸಿದರು.

ಆದಂ ಅಹ್ಸನಿ, ಹಝ್ರತ್ ಶೈಖ್‌ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮಾ ಮಸ್ಜಿದ್ ಅಧ್ಯಕ್ಷ ಉಸ್ಮಾನ್ ಶಾಫಿ, ಅಬ್ದುನ್ನಾಸಿರ್ ಸಅದಿ, ಅಬ್ದುರ್ರಹ್ಮಾನ್ ಹಿಮಾಮಿ, ಸಖಾಫಿ ಉಸ್ತಾದ್ ಮಾತನಾಡಿದರು.

ಇದನ್ನೂ ಓದಿ: ಚಿಕ್ಕಮಗಳೂರು | ತಗ್ಗಿದ ಮಳೆಯಬ್ಬರ: ಮುಂದುವರಿದ ಹಾನಿ

ಇದೇ ಸಂದರ್ಭ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 'ಸ್ವಾತಂತ್ರ್ಯ ಚಳವಳಿಯ ತೆರೆಮರೆಯ ಹೋರಾಟಗಾರ'ರ ಕಿರು ಪರಿಚಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳ ಹಲವು ಸ್ಪರ್ಧೆಗಳು ಜರುಗಿದವು.

ಅಬ್ದುಲ್ಲತೀಫ್ ಇಂಜಿನಿಯರ್ ಸ್ವಾಗತಿಸಿದರು. ರೌಫ್ ಪುಂಜಾಲಕಟ್ಟೆ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News