ಶಿವಸೇನೆಯಲ್ಲಿನ ಬಂಡಾಯದ ನಂತರ ಕಳೆದುಹೋದ ನೆಲೆ ಮರಳಿ ಪಡೆಯುವ ಕಾರ್ಯಕ್ಕೆ ಆದಿತ್ಯ ಠಾಕ್ರೆ ಚಾಲನೆ

Update: 2022-08-13 07:18 GMT
Photo:twitter

ಮುಂಬೈ: ಮಹಾರಾಷ್ಟ್ರದಲ್ಲಿ ತನ್ನ ತಂದೆ ಉದ್ಧವ್ ಠಾಕ್ರೆ ಅವರ ಸರಕಾರ ಪತನಗೊಂಡ ನಂತರ ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ (Aaditya Thackeray)ಪಕ್ಷದ ನೆಲೆಯೊಂದಿಗೆ ಸಂಪರ್ಕ ಸಾಧಿಸಲು ಹಾಗೂ  ಕಳೆದು ಹೋದ ನೆಲೆಯನ್ನು ಮರಳಿ ಪಡೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ತನ್ನ  ತಂದೆ ಉದ್ಧವ್ ಠಾಕ್ರೆ (Uddhav Thackeray)ನೇತೃತ್ವದ ಪಕ್ಷದ ಬಣವು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಜೂನಿಯರ್ ಠಾಕ್ರೆ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಬಂಡಾಯ ಶಿವಸೇನಾ ಶಾಸಕರ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಮುಂಬೈನ ವರ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ 32ರ ವಯಸ್ಸಿನ ಆದಿತ್ಯ ಠಾಕ್ರೆ ಕಳೆದ ಒಂದೂವರೆ ತಿಂಗಳಿನಿಂದ  ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.

ಅವರು 'ನಿಷ್ಠಾ ಯಾತ್ರೆ' ಹಾಗೂ  'ಶಿವ ಸಂವಾದ' ಅಭಿಯಾನದ ಮೂಲಕ ಪಕ್ಷದ ಕಾರ್ಯಕರ್ತರನ್ನು ತಲುಪುತ್ತಿದ್ದಾರೆ.

55 ಶಿವಸೇನ ಶಾಸಕರಲ್ಲಿ 40 ಮಂದಿ ಜೂನ್‌ನಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದು, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಸರಕಾರದ ಪತನಕ್ಕೆ ಕಾರಣವಾಗಿದ್ದರು. ಪಕ್ಷದ 18 ಲೋಕಸಭಾ ಸಂಸದರ ಪೈಕಿ 12 ಮಂದಿ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News