ಉಡುಪಿ ವಿದ್ಯಾರ್ಥಿ ನಿಲಯದ ಬಾಲಕಿಯರಿಂದ ಜಾಥ

Update: 2022-08-14 10:54 GMT

ಉಡುಪಿ : ಬನ್ನಂಜೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಉಡುಪಿ ಟೌನ್ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರಿಂದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ನಿಲಯ ದಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕ ಭವನದವರೆಗೆ ಜಾಥಾವನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.

ಜಾಥಕ್ಕೆ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಚಾಲನೆ ನೀಡಿದರು. ಪೌರಾಯುಕ್ತ ಡಾ.ಉದಯ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ಮಡ್ಲೂರು, ಸಹಾಯಕ ನಿರ್ದೇಶಕ ರಮೇಶ್ ಎಸ್. ಭಾಗವಹಿಸಿದ್ದರು.

ನಿಲಯ ಮೇಲ್ವಿಚಾರಕಿ ಸುಚಿತ್ರಾ ಎಸ್.ಎಸ್, ಐಟಿಡಿಪಿ ಸಿಬ್ಬಂದಿ ಶ್ರೀದೇವಿ, ನಿಲಯ ಸಿಬ್ಬಂದಿ ಸುಜಾತಾ, ಸುಜಾತಾ ಎಚ್.ಪಿ., ಪದ್ದು, ಸುಲೋಚನಾ, ರಪಿತಾ, ಇಂದಿರಾ, ಶ್ರೀರಕ್ಷಾ, ಶಶಿಕಲಾ ಉಪಸ್ಥಿತರಿದ್ದರು.

ಜಾಥಾದಲ್ಲಿ ತ್ರಿವರ್ಣ ಸೀರೆಯುಟ್ಟ ಭಾರತ ಮಾತೆಯರು, ಡಾ.ಬಿ.ಆರ್ ಅಂಬೇಡ್ಕರ್, ಛತ್ರಪತಿ  ಶಿವಾಜಿ, ಕಿತ್ತೂರ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಗಮನ ಸೆಳೆದರು. ಮೆರವಣಿಗೆಯುದ್ಧಕ್ಕೂ ತ್ರಿವರ್ಣ ಧ್ವಜ  ಹಿಡಿದ 200 ಕ್ಕೂ ಅಧಿಕ ವಿದ್ಯಾರ್ಥಿನಿಯರು ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಘೋಷಣೆ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News