ಅಲೆವೂರಿನಲ್ಲಿ ಶಾಲಾ ಮಕ್ಕಳಿಂದ ಪ್ರಭಾತ್ ಫೇರಿ

Update: 2022-08-14 10:56 GMT

ಉಡುಪಿ, ಆ.14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ, ನೆಹರು ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಬೋಧಿನಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡು ಅಲೆವೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರಭಾತ್ ಫೇರಿ ಕಾರ್ಯಕ್ರಮ ಅಲೆವೂರಿನಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಲೆವೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಲೆವೂರು ಮತ್ತು ನೆಹರು ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ ಅಲೆವೂರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷೆ ಪುಷ್ಪಾ ಅಂಚನ್ ಅಲೆವೂರಿನ ನೆಹರು ಕ್ರೀಡಾಂಗಣದಲ್ಲಿ ಶಾಲಾ ವಿದ್ಯಾರ್ಥಿ ಮುಖಂಡರುಗಳಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಶಾಲಾ ಮಕ್ಕಳು ದೇಶಪ್ರೇಮದ ಘೋಷಣೆಗಳೊಂದಿಗೆ ಹೊರಟ ನಡಿಗೆ ಗುಡ್ಡೆಯಂಗಡಿ- ರಾಮಪುರ-ಜೋಡುರಸ್ತೆ ಮಾರ್ಗವಾಗಿ ತೆರಳಿ ಮರಳಿ ನೆಹರು ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಪಿಡಿಓ ದಯಾನಂದ ಬೆನ್ನೂರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಅಲೆವೂರು ಹರೀಶ್ ಕಿಣಿ, ಶ್ರೀಕಾಂತ್ ನಾಯಕ್ ಕರ್ವಾಲು, ಸದಸ್ಯರುಗಳಾದ ಗುರುರಾಜ್ ಸಾಮಗ, ಶಬರೀಶ್ ಸುವರ್ಣ, ಜಲೇಶ್ ಶೆಟ್ಟಿ, ಯತೀಶ್ ಕುಮಾರ್, ರೂಪೇಶ್ ದೇವಾಡಿಗ, ಸೌಮ್ಯ ನಾಯಕ್, ಕೊರಂಗ್ರಪಾಡಿ ಸೊಸೈಟಿ ಅಧ್ಯಕ್ಷ ಹರೀಶ್ ಶೇರಿಗಾರ್, ನಿರ್ದೇಶಕ ಅಶೋಕ್ ಕುಮಾರ್, ಶಾಂತಿನಿಕೇತನ ಶಾಲಾ ಮುಖ್ಯಪಾಧ್ಯಾಯಿನಿ ರೂಪಾ ಡಿ. ಕಿಣಿ, ನೆಹರು ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಮಹೇಶ್, ನಿವೃತ್ತ ಕಲಾ ಶಿಕ್ಷಕ ಶೇಖರ್ ಕಲ್ಮಾಡಿ, ನಿವೃತ್ತ ಮುಖ್ಯೋಪಾಧ್ಯಾಯ ರಾಘವ ನಾಯ್ಕ್, ಸಂತೋಷ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಶಾಂತಿನಿಕೇತನ ಶಾಲಾ ಸಂಚಾಲಕ ಅಲೆವೂರು ದಿನೇಶ್ ಕಿಣಿ ಸ್ವಾಗತಿಸಿದರು. ಸುಬೋಧಿನಿ ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ಬಿ.ಎಸ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News