ಉಡುಪಿ; ಎಸ್‌ವೈಎಸ್‌ನಿಂದ ಮರೆತ ಭಾರತ ಅಭಿಯಾನಕ್ಕೆ ಚಾಲನೆ

Update: 2022-08-14 11:37 GMT

ಉಡುಪಿ : ನಾವು ಭಾರತೀಯರು. ಭಾರತ ನಮ್ಮ ದೇಶ. ಈ ದೇಶಕ್ಕೆ ಬಹಳವಾದ ಇತಿಹಾಸವಿದೆ. ಇತಿಹಾಸಸವನ್ನು ಯಾವ ರಾಜಕೀಯ ಶಕ್ತಿಗಳಿಗೂ ಮುಚ್ಚುವಂತಿಲ್ಲ. ಭಾರತದ ಸಂವಿಧಾನವನ್ನು ತಿರುಚಲು ಹೊರಟರೇ ಅದು ಅವರಿಗೇ ಮುಳ್ಳಾಗುತ್ತದೆ. ಇದು ಸರ್ವಧರ್ಮಿಯರ ಶಾಂತಿಯ ತೋಟವಾಗಿದೆ ಎಂದು ವಕೀಲ, ಎಸ್‌ವೈಎಸ್ ಉಡುಪಿ ಜಿಲ್ಲಾಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಎಸ್‌ವೈಎಸ್‌ನ ನಿರ್ದೇಶನ ಮೇರೆಗೆ ರಾಜ್ಯದ ಸರ್ವ ಸೆಂಟರ್‌ಗಳಲ್ಲಿ ನಡೆಸುವ ಮರೆತ ಭಾರತ ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಅಬ್ದುಲ್ ಲತೀಫ್ ಫಾಳಿಲಿ ನಾವುಂದ ಮಹ್ಲರತುಲ್ ಬದ್ರಿಯಾ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಕಾರ್ಯಕ್ರಮ ವನ್ನು ಅಬ್ದುಲ್ ರೆಹಮಾನ್ ಸಖಾಫಿ ಕೋಡಿ ಉದ್ಘಾಟಿಸಿದರು. ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎ.ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಾಜಿ ಮೊಯ್ದಿನ್ ಗುಡ್ವಿಲ್, ಸುನ್ನೀ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವ ಮೂಳೂರು, ಹಾಜಿ ಅಬ್ದುಲ್ಲಾ ಮೂಳೂರು, ಹುಸೈನ್ ಬೈಂದೂರು, ಉಮರ್ ಪುತ್ತಿಗೆ, ಹುಸೈನ್ ಪಡುಕರೆ, ಅಬ್ಬಾಸ್ ಮಾನಿಕೊಳಲು, ಹನೀಫ್ ಹಾಜಿ ಕನ್ನಂಗಾರ್ ಮೊದಲಾದವರು ಉಪಸ್ಥಿತರಿದ್ದರು. ಸಾಂತ್ವನ ಕಾರ್ಯದರ್ಶಿ ಪಿ.ಪಿ.ಬಷೀರ್ ಮುಸ್ಲಿಯಾರ್ ಸ್ವಾಗತಿಸಿದರು. ಸಲೀಂ ಪಕೀರ್ಣಕಟ್ಟೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News