ಗಾಂಧಿ, ನೆಹರೂ ಅವರಿಗೆ ಕಳಂಕ ತರುವ ಪ್ರಯತ್ನ: ಸ್ವಾತಂತ್ರ್ಯ ದಿನದಂದು ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ

Update: 2022-08-15 09:11 GMT

ಹೊಸದಿಲ್ಲಿ: ಕೇಂದ್ರ ಸರಕಾರವು ತನ್ನ ರಾಜಕೀಯ ಪ್ರಚಾರವನ್ನು ಹೆಚ್ಚಿಸಲು ನಾಯಕರಾದ ಮಹಾತ್ಮ ಗಾಂಧಿ ಹಾಗೂ  ಜವಾಹರಲಾಲ್ ನೆಹರು ಅವರಿಗೆ ಕಳಂಕ ತರಲು ಪ್ರಯತ್ನಿಸುತ್ತಿದೆ ಎಂದು  ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Congress interim president Sonia Gandhi ) ಅವರು ಸೋಮವಾರ ತಮ್ಮ ಸ್ವಾತಂತ್ರ್ಯ ದಿನದ ಹೇಳಿಕೆಯಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತೀಯ ಪಡೆಗಳು ಮಾಡಿದ ತ್ಯಾಗವನ್ನು ಕಡಿಮೆ ಮಾಡಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

"ಐತಿಹಾಸಿಕ ಸತ್ಯಗಳನ್ನು ಸುಳ್ಳು ಮಾಡಲು ಹಾಗೂ  ಗಾಂಧಿ-ನೆಹರು-ಆಝಾದ್-ಪಟೇಲ್ ಅವರಂತಹ ನಾಯಕರಿಗೆ ಕಳಂಕ ತರಲು  ಸರಕಾರ ಮಾಡುತ್ತಿರುವ ಪ್ರತಿಯೊಂದು ಪ್ರಯತ್ನವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸುತ್ತದೆ" ಎಂದು ಅವರು ಹೇಳಿದರು.

ಭಾರತದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕೆ ಶುಭ ಹಾರೈಸಿದ ಸೋನಿಯಾ ಗಾಂಧಿ, “ಕಳೆದ 75 ವರ್ಷಗಳಲ್ಲಿ ಹೆಚ್ಚು ಪ್ರತಿಭಾವಂತ ಭಾರತೀಯರು ದೇಶವನ್ನು ವಿಜ್ಞಾನ, ಶಿಕ್ಷಣ, ಆರೋಗ್ಯ ಹಾಗೂ  ಮಾಹಿತಿ ಕ್ಷೇತ್ರಗಳಲ್ಲಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಭಾರತದ ದೂರದೃಷ್ಟಿಯ ನಾಯಕರು ಮುಕ್ತ, ನ್ಯಾಯಸಮ್ಮತ ಹಾಗೂ  ಪಾರದರ್ಶಕ ಚುನಾವಣಾ ವ್ಯವಸ್ಥೆಗೆ ಅಡಿಪಾಯವನ್ನು ಹಾಕಿದ್ದರು. ಅವರು ಶಕ್ತಿಯುತ ಪ್ರಜಾಪ್ರಭುತ್ವ ಹಾಗೂ  ಸಾಂವಿಧಾನಿಕ ಸಂಸ್ಥೆಗಳಿಗೆ ನಿಬಂಧನೆಗಳನ್ನು ರೂಪಿಸಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News