ವಡಗರ ಕ್ಲಬ್‌ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ: ಜಯಂತಿ ಟೀಚರ್‌, ಅಬ್ಬಾಸ್‌ ಮುಸ್ಲಿಯಾರ್‌ ರಿಗೆ ಸನ್ಮಾನ

Update: 2022-08-15 12:56 GMT

ಬಂಟ್ವಾಳ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗೋಳ್ತಮಜಲಿನ ವಡಗರ ಯೂತ್‌ ಕ್ಲಬ್‌ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. 

ತಾಲೂಕು ಪಂಚಾಯತ್‌ ಸದಸ್ಯ ಮಹಾಬಲ ಆಳ್ವ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಗೋಳ್ತಮಜಲು ಅಂಗನವಾಡಿಯಲ್ಲಿ 32 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜಯಂತಿ ಟೀಚರ್ ಮತ್ತು ಗೋಳ್ತಮಜಲು ಮದ್ರಸದಲ್ಲಿ 32 ವರ್ಷಗಳಿಂದ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಅಬ್ಬಾಸ್‌ ಮುಸ್ಲಿಯಾರ್‌ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಹಜಾಜ್‌ ಗ್ರೂಪ್ ನ ಹನೀಫ್ ಹಾಜಿ, ಅಬ್ದುಲ್‌ ಹಮೀದ್‌, ಮುಹಮ್ಮದ್‌ ಹಾಜಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News