ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-15 13:30 GMT

ಮಂಗಳೂರು:  ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಸೈಯದ್ ಅಹ್ಮದ್ ಭಾಷಾ ತಂಙಳ್, ಸದಸ್ಯರಾದ ಅಶ್ರಫ್ ಹಳೆಮನೆ, ಐ. ಮೊಯ್ದಿನಬ್ಬ ಹಾಜಿ ನೆರವೇರಿಸಿದರು.

ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ದುಅಗೈದರು. ಮಸೀದಿಯ ಮ್ಯಾನೇಜರ್ ಬಿ.ಅಬ್ದುಲ್ ರಹ್ಮಾನ್, ಜಲಾಲ್ ಮಸ್ತಾನ್ ಹಿಫ್ಳುಲ್ ಕುಆನ್ ಕಾಲೇಜಿನ ಉಸ್ತಾದರಾದ ಹಾಫಿಳ್ ಮುಹಮ್ಮದ್ ಅಝ್ಹರುದ್ದೀನ್ ಅನ್ಸಾರಿ, ಹಾಫಿಳ್ ಮುಹಮ್ಮದ್ ಜುನೈದ್ ಅಝ್ಹರಿ, ಸ್ಥಳೀಯರಾದ ಹಾಜಿ ರಿಯಾಝುದ್ದೀನ್ ಬಂದರ್, ರಿಯಾಝ್ ಕಚ್‌ಮನೆ  ಮತ್ತಿತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News