ಇನೋಳಿ: ಬ್ಯಾರೀಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-15 15:36 GMT

ಕೊಣಾಜೆ: ಇನೋಳಿಯ ಬ್ಯಾರೀಸ್ (BIT, BEADS, BIT Polytechnic) ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರೋತ್ಸವ ಸಮಾರಂಭವು  ಸೋಮವಾರ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯೆನೆಪೊಯ ವಿಶ್ವವಿದ್ಯಾನಿಲಯದ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಇಸ್ಮಾಯಿಲ್ ಅವರು, ಸಾವಿರಾರು ಜನರ ತ್ಯಾಗ,  ಬಲಿದಾನ ಮೂಲಕ‌ ನಮ್ಮ ದೇಶವು ಸ್ವಾತಂತ್ರ್ಯಗೊಂಡಿದೆ. ನಾವು ದೇಶ ಪ್ರೇಮದೊಂದಿಗೆ ದೇಶಕ್ಕಾಗಿ ನಮ್ಮದೇ  ಆದ ಕೊಡುಗೆ ನೀಡಬೇಕಿದೆ. ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶಗಳಿದ್ದು, ಯುವ ಸಮುದಾಯ ಪರಿಶ್ರಮ ಹಾಗೂ ಸಾಧನೆಯೊಂದಿಗೆ ಮುನ್ನಡೆಯಿರಿ ಎಂದು ಹೇಳಿದರು.

ಈ ದಿನವು 200 ವರ್ಷಗಳ ಬ್ರಿಟಿಷ್ ವಸಾಹತುಶಾಹಿಯ ಹಿಡಿತದಿಂದ ವಿಮೋಚನೆಗೊಂಡ ದಿನವಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಈ ದಿನದ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ BEADS ಪ್ರಾಂಶುಪಾಲರಾದ ಆರ್. ಅಶೋಕ್ ಮೆಂಡೋನ್ಕಾ, BIT Polytechnic ನಿರ್ದೇಶಕ ಡಾ. ಅಝೀಝ್ ಮುಸ್ತಫಾ, BITಯ ಪ್ರಾಂಶುಪಾಲರಾದ ಡಾ.ಎಸ್.ಐ.ಮಂಜುರ್ ಬಾಷಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ BIT, BEADS, BIT Polytechnicನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News