ಭಾರತಕ್ಕೆ ಸ್ವಾತಂತ್ರೋತ್ಸವ ಶುಭಾಶಯ ಸಲ್ಲಿಸಿದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ

Update: 2022-08-15 17:49 GMT
(Photo | ISRO @ Twitter)

ವಾಷಿಂಗ್ಟನ್, ಆ.15: ಭಾರತದ 75ನೇ ಸ್ವಾತಂತ್ರೋತ್ಸವದ ಸಂದರ್ಭ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಅತ್ಯಂತ ವಿಶೇಷವಾದ ಶುಭಾಶಯ ಸಂದೇಶ ದೊರಕಿದೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಹೇಳಿದ್ದಾರೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟಿ ಸ್ವಾತಂತ್ರೋತ್ಸವದ ಶುಭಾಶಯ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಧು ‘ ಆಗಸವು ಮಿತಿಯಲ್ಲ. 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಭಾರತಕ್ಕೆ ಗಗನಯಾತ್ರಿ ಸಮಂತಾ ಶುಭ ಹಾರೈಸಿದ್ದಾರೆ. ಅವರ ಸಂದೇಶಕ್ಕೆ ಅಭಿನಂದನೆಗಳು. ನಾಸಾ, ಇಸ್ರೋ ಮತ್ತು ಇಎಸ್‌ಎ ನಡುವಿನ ನೈಜ ಸಹಭಾಗಿತ್ವಕ್ಕೆ ಇದು ಸಂಕೇತವಾಗಿದೆ’ ಎಂದಿದ್ದಾರೆ. ಈ ವೀಡಿಯೊವನ್ನು ಶೇರ್ ಮಾಡಿರುವ ಇಸ್ರೋ, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವಕ್ಕೆ ಶುಭ ಹಾರೈಸಿದವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News