ದೇಶದ ವೈವಿಧ್ಯತೆಗೆ ಗೌರವ ಸಲ್ಲಿಸಿದ ಪ್ರಧಾನಿ

Update: 2022-08-15 18:26 GMT

ಹೊಸದಿಲ್ಲಿ: ಕೆಂಪು ಕೋಟೆಯಿಂದ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪರಂಪರೆ ಹಾಗೂ ವೈವಿದ್ಯತೆಗೆ ಗೌರವ ಸಲ್ಲಿಸಿದ್ದಾರೆ ಹಾಗೂ ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಬಣ್ಣಿಸಿದ್ದಾರೆ.

ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶದ ಅಭಿವೃದ್ಧಿ ಸಾಮರ್ಥ್ಯ ಹಾಗೂ ಅದು ಸಾಗುವ ಪಥದ ಬಗ್ಗೆ ಹಲವು ಸಂದೇಹವಾದಿಗಳು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಈ ನೆಲದ ಜನರಲ್ಲಿ ಕೆಲವು ವಿಶಿಷ್ಟತೆ ಇದೆ ಎಂಬುದನ್ನು ಅವರು ಅರಿತುರಲಿಲ್ಲ. ಅವರು ಈ ಮಣ್ಣಿನ ವಿಶೇಷತೆಯನ್ನು ತಿಳಿದುಕೊಂಡಿರಲಿಲ್ಲ ಎಂದು ಅವರು ಹೇಳಿದರು.

ಸಾಮೂಹಿಕ ಶಕ್ತಿಯಿಂದ ಬದಲಾವಣೆ ನಡೆಯುವ ಮಹತ್ವಾಕಾಂಕ್ಷೆಯ ಸಮಾಜ ಭಾರತದ್ದು. ಅಂತಹ ಸಮಾಜವೇ ಆಸ್ತಿ. ಭಾರತದ ಜನರು ಸಕಾರಾತ್ಮಕ ಬದಲಾವಣೆ ಬಯುಸುತ್ತಿದ್ದಾರೆ. ಅವರು ಅದನ್ನು ತ್ವರಿತಗತಿಯಲ್ಲಿ ಬಯಸುತ್ತಾರೆ. ಇದಕ್ಕೆ ಕೊಡುಗೆ ನೀಡಲು ಕೂಡ ಅವರು ಸಿದ್ಧರಿದ್ದಾರೆ. ಜಗತ್ತಿಗೆ ಭಾರತ ಆಶಾ ಕಿರಣ ಎಂದು  ಪ್ರಧಾನಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News