ಮೂಳೂರು ಜುಮಾ ಮಸೀದಿ, ಸಿರಾಜುಲ್ ಇಸ್ಲಾಂ ಮದ್ರಸ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
Update: 2022-08-16 19:04 IST
ಮೂಳೂರು, ಆ. 16: ಮೂಳೂರು ಜುಮಾ ಮಸೀದಿ ಮತ್ತು ಸಿರಾಜುಲ್ ಇಸ್ಲಾಂ ಅರೆಬಿಕ್ ಮದ್ರಸ ವತಿಯಿಂದ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷರಾದ ಸೈಯದ್ ಮುರಾದ್ ಅಲಿ, ಮುದರ್ರಿಸ್ ಹಾಫಿಲ್ ಅಶ್ರಫ್ ಸಖಾಫಿ ಹಾಗೂ ಮದ್ರಸ ಅಧ್ಯಕ್ಷರಾದ ಅಹ್ಮದ್ ಬಾವ ವೈಬಿಸಿ ಅವರು ನೆರವೇರಿಸಿದರು.
ಈ ಸಂದರ್ಭ ಮದ್ರಸದ ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ಸಅದಿ, ಹಾಜಿ ಎಂಎ ಬಾವು (ಪ್ರಧಾನ ಕಾರ್ಯದರ್ಶಿ, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್), ಬಶೀರ್ ಅಲಿ ವೈಬಿಸಿ (ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲೆ), ಮದ್ರಸದ ಕೋಶಾಧಿಕಾರಿ ಉಮ್ಮರ್ ಮೊಹಿದ್ದೀನ್, ಮಸೀದಿಯ ಕೋಶಾಧಿಕಾರಿ ಎಂಎಸ್ ಅಬ್ದುಲ್ ರಹ್ಮಾನ್, ಹಮೀದ್ ಅದ್ದು, ಅಬ್ಬು ಹಾಜಿ ಹಾಗೂ ಹಿರಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಅಬ್ದುಲ್ ಹಮೀದ್ ಯೂಸುಫ್ ಕಾರ್ಯಕ್ರಮ ನಿರೂಪಿಸಿದರು. ಮದ್ರಸದ ಕಾರ್ಯದರ್ಶಿ ಅಮೀರ್ ಹಸನ್ ವಂದಿಸಿದರು.