ದ.ಕ.ಜಿಲ್ಲೆಯ ವಿವಿಧೆಡೆ ‘ಎಸ್‌ವೈಎಸ್-ಫ್ರೀಡಂ ಸ್ವೀಟ್’ ಕಾರ್ಯಕ್ರಮ
ಸುರತ್ಕಲ್ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದ.ಕ.ಜಿಲ್ಲೆಯ ವಿವಿಧೆಡೆ ‘ಎಸ್‌ವೈಎಸ್-ಫ್ರೀಡಂ ಸ್ವೀಟ್’ ಕಾರ್ಯಕ್ರಮ ಸೋಮವಾರ ನಡೆಯಿತು. ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಸಂವಿಧಾನದ ಪೀಠಿಕೆಯ ಧ್ಯೇಯದಂತೆ ಕಾಪಾಡುವ ಪ್ರತಿಜ್ಞೆ ಮಾಡಲಾಯಿತು.
ಎಸ್‌ವೈಎಸ್ ಸುರತ್ಕಲ್ ವಲಯ ಮತ್ತು ಶಾಖೆಗಳ ವತಿಯಿಂದ ಚೊಕ್ಕಬೆಟ್ಟು ಕಚೇರಿಯಲ್ಲಿ ನಡೆದ ಕಾರ್ಯಕ್ರಮ ವನ್ನು ಎಸ್‌ವೈಎಸ್ ಕರ್ನಾಟಕ ರಾಜ್ಯ ಸಂಚಾಲಕ ಮೌಲಾನ ಅಝೀಝ್ ದಾರಿಮಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯವು ಭಾರತದ ಕಟ್ಟಕಡೆಯ ಪ್ರಜೆಯಲ್ಲಿ ಬದುಕುವ ಉತ್ಸಾಹವನ್ನು ತುಂಬುವಂತಾದಾಗ ಮಾತ್ರ ಸ್ವಾತಂತ್ರ್ಯವು ಸಿಹಿಯಾಗಿ ಬದಲಾಗುತ್ತದೆ. ಧರ್ಮ ಧ್ವೇಷದ ಕಹಿಯು ಕೊನೆಯಾಗುವ ತನಕ ನಮ್ಮ ಪರಿಶ್ರಮ ಮುಂದುವರಿಯಲಿ ಎಂದು ಹೇಳಿದರು.
ಟಿ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಉಸ್ತಾದ್ ತಬೂಕ್ ದಾರಿಮಿ ಮುಖ್ಯ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಎಂಪಿ ಮೊಯಿದೀನ್ ಪಲಿಮಾರ್ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಸಿಫ್ ಯಮಾನಿ, ಶಿಹಾಬುದ್ದೀನ್, ಖಲಂದರ್, ಇಸ್ಮಾಯಿಲ್, ಬಶೀರ್, ಅಶ್ರಫ್ ನಾಟೆಕಲ್, ನೂರ್ ಮುಹಮ್ಮದ್, ಹಮೀದ್ ಹಾಜಿ, ಎಸ್‌ಕೆ ಇಬ್ರಾಹಿಂ ಪಾಲ್ಗೊಂಡಿದ್ದರಿ. ಕಮಾಲುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
ವಿಟ್ಲ ವಲಯದ ಕಾರ್ಯಕ್ರಮವು ಕೆಎಲ್ ಉಮರ್ ದಾರಿಮಿ, ಕೆಎಂಎ ಕೊಡುಂಗಾಯಿ, ಮಿತ್ತಬೈಲು ವಲಯದ ಕಾರ್ಯಕ್ರಮವು ಟಿಎಂ ಹನೀಫ್ ಮುಸ್ಲಿಯಾರ್, ಶರೀಫ್ ಮಿತ್ತಬೈಲು, ದೇರಳಕಟ್ಟೆ ವಲಯದ ಕಾರ್ಯಕ್ರಮವು ಸೈಯದ್ ಅಲಿ, ತಬೂಕ್ ದಾರಿಮಿ, ಪುತ್ತೂರು ವಲಯದ ಕಾರ್ಯಕ್ರಮವು ಉಸ್ಮಾನುಲ್ ಫೈಝಿ, ಮುಲಾರ್ ಅಬೂಬಕರ್, ಮೂಡಿಗೆರೆ ಹಾಜಿ ಸಿಕೆ ಇಬ್ರಾಹಿಂ, ಸುಲೈಮಾನ್ ಉಸ್ತಾದ್ ನೇತೃತ್ವದಲ್ಲಿ ನಡೆಯಿತು.