ಉಳ್ಳಾಲ: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್‌ನಲ್ಲಿ ಪ್ರತಿಭಾ ಪುರಸ್ಕಾರ, ಪ್ರಮಾಣ ಪತ್ರ ವಿತರಣೆ

Update: 2022-08-16 16:56 GMT

ಉಳ್ಳಾಲ: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ, ಉಳ್ಳಾಲ ಸೆಂಟರ್ ಇದರ ಆಶ್ರಯದಲ್ಲಿ 2021-22 ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭ ತೊಕ್ಕೊಟ್ಟು ಸಮೀಪದ ಯುನಿಟಿ ಹಾಲ್ ನಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಬಗಂಬಿಲ ಶಾಲೆ ಶಿಕ್ಷಕಿ ಪ್ರತಿಮಾ ಹೆಬ್ಬಾರ್ ಮಾತನಾಡಿ, ಯಾವುದೇ ಧರ್ಮ ಗ್ರಂಥಗಳನ್ನು ತೆರೆದು ನೋಡಿದರೆ ನಮಗೆ ಸಿಗುವುದು ಪ್ರೀತಿ, ವಿಶ್ವಾಸ ಐಕ್ಯತೆಯ ವಿಚಾರಗಳು. ಪ್ರತಿಭಾ ಪುರಸ್ಕಾರ ಪಡೆದವರು ಪುರಸ್ಕಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದ ಮಾನವೀಯ ಮೌಲ್ಯ ಗಳನ್ನು ಉಳಿಸುವ ಕಾರ್ಯ ನಮ್ಮದಾಗಬೇಕು ಎಂದು ಹೇಳಿದರು.

ಡಾ.ಸಲೀಮಾ ಭಾನು, ತ್ಯಾಗಂ ಹರೇಕಳ, ಮುಸ್ಲಿಂ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಮಾತನಾಡಿ ಶಿಕ್ಷಣದ ಮಹತ್ವವನ್ನು ವಿವರಿಸಿದರು.

ಚಾರ್ಟೆಡ್ ಅಕೌಂಟೆಂಟ್ ಮುಹಮ್ಮದ್ ಇಸ್ಹಾಕ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ವಲಯ ಅಧ್ಯಕ್ಷ ಅಬ್ದುಲ್ ಕರೀಂ, ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ, ಉಳ್ಳಾಲ ಸೆಂಟರ್ ನ ಸಂಚಾಲಕ ಅಬ್ದುಲ್ ರಹೀಂ, ಫಾತಿಮಾ ಅಂಜು  ಎ.ಎಚ್ ಮಹಮೂದ್ ಮತ್ತಿತರರು ಉಪಸ್ಥಿತರಿದ್ದರು. 

ಮುಬೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News