ಮಾಣಿ ವಲಯ ಎಸ್ಕೆಎಸ್ಎಸ್ಎಫ್ ನಿಂದ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ

Update: 2022-08-17 04:14 GMT

ವಿಟ್ಲ : ಮಾಣಿ ವಲಯ ಎಸ್ಕೆಎಸ್ಎಸ್ಎಫ್ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆಯುವ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮವು ನೇರಳಕಟ್ಟೆಯ ಎಸ್ಕೆಎಸ್ಎಸ್ಎಫ್ ಕಚೇರಿಯಲ್ಲಿ ಸೋಮವಾರ ಸಂಜೆ ನಡೆಯಿತು.

ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಶೇಖ್ ಮೊಹಮ್ಮದ್ ಇರ್ಫಾನಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಎಸ್ಎಫ್  ಮಾಣಿ ವಲಯಾಧ್ಯಕ್ಷ ಎಸ್. ಮುಹಮ್ಮದ್ ಜಮಾಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ದಾರಿಮಿ ದುಹಾ ನೆರವೇರಿಸಿದರು.

ಮುಖ್ಯ ಭಾಷಣಗೈದ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದ ಪ್ರೇರಣಾ ಕೇಂದ್ರಗಳಾಗಿದ್ದ ಮದರಸಗಳ ಬಗ್ಗೆ ಅಪಪ್ರಚಾರಗಳು ನಡೆಸಲಾಗುತ್ತಿದೆ, ರಾಜಕೀಯ ಹಿತಾಸಕ್ತಿಗಾಗಿ ದೇಶದ ಜನರ ನಡುವೆ ಜಾತಿ, ಧರ್ಮದ ಹೆಸರಿನಲ್ಲಿ ಕೋಮುದ್ವೇಷ ಮೂಡಿಸಿ ಅವಿಶ್ವಾಸ - ಅಶಾಂತಿಯನ್ನು ಸೃಷ್ಟಿಸುತ್ತಿರುವುದು   ದೇಶದ ಏಕತೆ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಯಾವುದೇ ಕಾರಣಕ್ಕೂ ನಾವು ಇದಕ್ಕೆ ಆಸ್ಪದ ನೀಡದೆ ಭವ್ಯ ಭಾರತದ ಸಂವಿಧಾನ ಆಶಯದಂತೆ ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡು ಬದುಕಬೇಕು  ಎಂದು ಕರೆ ನೀಡಿದರು.

ನೇರಳಕಟ್ಟೆ ನಮ್ಮ ಕುಟೀರ ಸೇವಾಶ್ರಮದ ಡಿ.ಕೆ.ಸ್ವಾಮೀಜಿ ನೇರಳಕಟ್ಟೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ, ಗಡಿಯಾರ ಜುಮಾ ಮಸೀದಿ ಅಧ್ಯಕ್ಷ ರಿಯಾಝ್ ಕಲ್ಲಾಜೆ, ಸೂರಿಕುಮೇರ್ ಜುಮಾ ಮಸೀದಿ ಅಧ್ಯಕ್ಷ ಮೂಸಾ ಕರೀಂ ಮಾಣಿ, ಗಡಿಯಾರ ಖತೀಬ್ ಉಮ್ಮರ್ ಫೈಝಿ, ಪರ್ಲೊಟ್ಟು ಖತೀಬ್ ಸೈದಲಿ ಮುಸ್ಲಿಯಾರ್, ಕೊಡಾಜೆ ಸದರ್ ಟಿ.ಎ.ಝಕರಿಯಾ ಅಸ್ಲಮಿ, ಮುಹಮ್ಮದ್ ಅಲಿ ಮುಸ್ಲಿಯಾರ್ ಸೂರಿಕುಮೇರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎಸ್ಕೆಎಸ್ಎಸ್ಎಫ್ ಮಾಣಿ ಕ್ಲಸ್ಟರ್ ಅಧ್ಯಕ್ಷ ಇಲ್ಯಾಸ್ ನೇರಳಕಟ್ಟೆ, ಮಾಣಿ ವಲಯ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಪಂತಡ್ಕ, ಕಲ್ಲಡ್ಕ ಕ್ಲಸ್ಟರ್ ನಿಯಾಝ್ ಗೋಳ್ತಮಜಲು, ಮಾಣಿ ವಲಯ ವರ್ಕಿಂಗ್ ಕಾರ್ಯದರ್ಶಿ ಅಹಮದ್ ನಿಝಾರ್ ಮುಸ್ಲಿಯಾರ್, ಕಲ್ಲಡ್ಕ ಕ್ಲಸ್ಟರ್ ಅಧ್ಯಕ್ಷ ರಫೀಕ್ ಫೈಝಿ  ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಸಹಚಾರಿ ಎವಾರ್ಡ್ ನೀಡಿ ಗೌರವಿಸಲಾಯಿತು.  

ಎಸ್ಕೆಎಸ್ಎಸ್ಎಫ್ ಮಾಣಿ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಕೌಸರಿ ಸ್ವಾಗತಿಸಿ, ಪಿ.ಜೆ.ಅಬ್ದುಲ್ ಅಝೀಝ್ ಗಡಿಯಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News