ನೇರಳಕಟ್ಟೆ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

Update: 2022-08-17 05:36 GMT

ವಿಟ್ಲ: ನೇರಳಕಟ್ಟೆಯ ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎನ್.ಕೆ.ಅಬೂಬಕ್ಕರ್ ಧ್ವಜಾರೋಹಣ ನೆರವೇರಿಸಿದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಸದಸ್ಯರುಗಳಾದ ಕೆ. ಶ್ರೀಧರ ರೈ, ಲತೀಫ್ ನೇರಳಕಟ್ಟೆ, ಪ್ರೇಮ, ಲಕ್ಷ್ಮಿ, ಸಮಿತಾ ಡಿ.ಪೂಜಾರಿ, ಶಾಲಿನಿ, ಅಶೋಕ್ ರೈ, ಧನುಂಜಯ, ಪ್ರಮುಖರಾದ ಡಿ.ತನಿಯಪ್ಪ ಗೌಡ, ಕೆ. ಸುರೇಶ ರೈ ಕುರ್ಲೆತ್ತಿಮಾರು, ಡಾ. ಮನೋಹರ ರೈ ಅಂತರಗುತ್ತು, ಎನ್.ಕೆ.ಖಾಸಿಂ, ಅಬ್ದುಲ್ ಖಾದರ್ ದರ್ಬಾರ್, ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ಪ್ರಕಾಶ್ ರೈ ಕುರ್ಲೆತ್ತಿಮಾರು, ರಝಾಕ್ ಸಾಹೇಬ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಭಾರತಿ, ಸದಸ್ಯರುಗಳಾದ ಕೆ. ನಿರಂಜನ್ ರೈ, ಹಮೀದ್ ಪರ್ಲೋಟ್ಟು, ಚಂದ್ರಶೇಖರ ಪೆರಾಜೆ, ಅತಾವುಲ್ಲಾ ನೇರಳಕಟ್ಟೆ, , ಹಂಝ ನೇರಳಕಟ್ಟೆ, ರಶೀದ್ ಪರ್ಲೊಟ್ಟು, ಪೂವಪ್ಪ ಗೌಡ, ವೇದಾವತಿ, ರೇಣುಕಾ, ಮುನಿರಾ, ಸಫಿಯ  ಅನಿಷ, ಲತಾ, ಶಶಿಕಲಾ, ಅಂಗನವಾಡಿ ಶಿಕ್ಷಕಿ ವಸಂತಿ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಾಲಾ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿದರು, ಸಹ ಶಿಕ್ಷಕಿ ಗೀತಾ ಕುಮಾರಿ ವಂದಿಸಿ, ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರುಗಳಾದ  ಲೀಲಾವತಿ,  ಸೇಸಪ್ಪ  ನಾಯ್ಕ,  ಅನಿತಾ,  ಪುಣ್ಯಶ್ರೀ,  ಸುಧೀರ್ ಭಟ್  ಹಾಗೂ  ಅಡುಗೆ ಸಿಬ್ಬಂದಿಗಳು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News