×
Ad

ಕಾಶ್ಮೀರಿ ಪಂಡಿತರನ್ನು ರಕ್ಷಿಸಿ : ಪೇಜಾವರಶ್ರೀ ಆಗ್ರಹ

Update: 2022-08-17 11:37 IST

ಉಡುಪಿ, ಆ.17: ಜಮ್ಮು ಕಾಶ್ಮೀರದಲ್ಲಿ ಹಿಂದೂ ಹತ್ಯಾಕಾಂಡ ಮತ್ತೆ ಮುಂದುವರಿದಿರುವುದನ್ನು ಕಂಡು ತೀವ್ರ ಕಳವಳವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ  ತೀರ್ಥರು ತಿಳಿಸಿದ್ದಾರೆ.

ಈ ಬಗ್ಗೆ ತಾನೀಗ ಇರುವ ಹೈದರಾಬಾದ್‌ನಿಂದ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಸ್ವಾಮೀಜಿ, ಇತ್ತೀಚೆಗೆ ಹಿಂದೂ ಸಹೋದರರು ಮೇಲೆ ಪೈಶಾಚಿಕ ಹಲ್ಲೆ ನಡೆದಿದ್ದು, ಓರ್ವ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ತಿಳಿದು ಆಘಾತವಾಗಿದೆ ಎಂದಿದ್ದಾರೆ.

ಈ ಹತ್ಯೆ ಅತ್ಯಂತ ಖಂಡನಾರ್ಹವಾಗಿದ್ದು, ಸರ್ಕಾರ ಇಂಥ ಪೈಶಾಚಿಕ ಕೃತ್ಯ ಗಳಿಗೆ ಸಂಪೂರ್ಣ ವಿರಾಮ ಹಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕಾಶ್ಮೀರಿ ಪಂಡಿತರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಪಂಡಿತರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News