×
Ad

ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2022-08-17 16:45 IST

ಹಳೆಯಂಗಡಿ: ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರ್ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ರಿಲಯನ್ಸ್ ಭವನದ ಮುಂಭಾಗದಲ್ಲಿ  ಆಚರಿಸಲಾಯಿತು.

ಧ್ವಜಾರೋಹಣವನ್ನು ರಿಲಯನ್ಸ್ ನ ಅಧ್ಯಕ್ಷ ಅಕ್ಬರ್ ಬೊಳ್ಳೂರ್ ನೆರವೇರಿಸಿದರು. ಸದರ್ ಮುಅಲ್ಲಿಮ್ ನಾಸಿರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣಗೈದರು. ಸಂಸ್ಥೆಯ ಲೆಕ್ಕಪರಿಶೋಧಕ ಕೌಶಿಕ್ ಎಂ.ಸಿ.ಎಫ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಝೀಝ್ ಐ.ಎ.ಕೆ, ಪಿ.ಎಫ್.ಐ ಮಂಗಳೂರು ಗ್ರಾಮೀಣ ಕಾರ್ಯದರ್ಶಿ ಮೊಹ್ದಿನ್ ಹಳೆಯಂಗಡಿ, SDTU ಕಾರ್ಯದರ್ಶಿ ಆರೀಸ್ ನವರಂಗ್, ಮುಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿ ಅಬ್ದುಲ್ ಹಮೀದ್, ಎಲ್.ಐ.ಡಿ.ಸಿ  ಬೊಳ್ಳೂರು ಇದರ ಅಧ್ಯಕ್ಷ ಶಮೀಮ್ ಬೊಳ್ಳೂರು, ಕರೀಂ ಬೊಳ್ಳೂರ್, ರಿಲಯನ್ಸ್  ಎನ್.ಆರ್.ಐ ಘಟಕದ ಆಸೀಫ್ ಮಸ್ಕತ್, ಹ್ಯಾರಿಸ್ ಕತಾರ್, ಕಲಂದರ್ ಹ್ಯಾರಿಸ್ ಸೌದಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಮುಬಾರಕ್ ಬೊಳ್ಳೂರು,ರಿಲಯನ್ಸ್ ನ ಸದಸ್ಯರು ಹಾಗು ಊರನಾಗರಿಕರು ಉಪಸ್ಥಿತರಿದ್ದರು.

ರಿಲಯನ್ಸ್ ನ ಪ್ರಧಾನ ಕಾರ್ಯದರ್ಶಿ ಇಕ್ಬಲ್ ಎಂ.ಎ ಸ್ವಾಗತಿಸಿದರು. ರಿಲಯನ್ಸ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಬೊಳ್ಳೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News