ತುಳುನಾಡಿನ ಸಂಸ್ಕೃತಿ ಅಧ್ಯಯನ: ಮಾಹೆಯಲ್ಲಿ ಆನ್‌ಲೈನ್ ಕೋರ್ಸ್

Update: 2022-08-17 13:58 GMT

ಉಡುಪಿ, ಆ.17: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಸೆಂಟರ್ ಫಾರ್ ಇಂಡರ್‌ಕಲ್ಚರಲ್ ಸ್ಟಡೀಸ್ ಆ್ಯಂಡ್ ಡಯಲಾಗ್ (ಸಿಎಸ್‌ಐಡಿ) ಘಟಕದ ವತಿಯಿಂದ ‘ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಆನ್‌ಲೈನ್ ಕೋರ್ಸ್ ಆರಂಭಿ ಸುತಿದ್ದು, ಇದರ ಉದ್ಘಾಟನೆ ಆ.18ರ ಗುರುವಾರ ಸಂಜೆ 4.30ಕ್ಕೆ ಮಣಿಪಾಲ ಮಾಹೆಯ ಮುಖ್ಯ ಕಚೇರಿ ಅಂಗಣದಲ್ಲಿ ನಡೆಯಲಿದೆ.

ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ (ಎಂಇಎಂಜಿ) ಅಧ್ಯಕ್ಷ ಡಾ.ರಂಜನ್ ಪೈ ಅವರು ಮಾಹೆಯ ಈ ಹೊಸ ಆನ್‌ಲೈನ್ ಕೋರ್ಸ್‌ನ್ನು ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಲೆ.ಜ.ಡಾ.ಎಂ.ಡಿ. ವೆಂಕಟೇಶ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಉಡುಪಿ ಜಾನಪದ ಸಂಸ್ಕೃತಿ ಹಾಗೂ ಜನಪದ ಬದುಕಿನ ಸಂಭ್ರಮವನ್ನು ಪ್ರತಿನಿಧಿಸುವ ಕಲೆಯಾಗಿರುವ ‘ಹುಲಿವೇಷ’ ಕುಣಿತವನ್ನು ಉಡುಪಿಯ ಪ್ರಸಿದ್ಧ ಹುಲಿವೇಷ ತಂಡವಾಗಿರುವ ಅಶೋಕ್ ಕಾಡುಬೆಟ್ಟು ಬಳಗ ಪ್ರಸ್ತುತ ಪಡಿಸಲಿದೆ ಎಂದು ಘಟಕದ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸಂಸ್ಕೃತಿ ಅಧ್ಯಯನ: ಸ್ಥಳೀಯ ಸಂಸ್ಕೃತಿಯ ಮೂಲಕ ಸಮಗ್ರ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಈ ಅಭ್ಯಾಸ ಕ್ರಮದ ಆಶಯವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮಣಿಪಾಲ ತುಳುಸಂಸ್ಕೃತಿ ಹಾಗೂ ಪರಿಸರದ ನಡುವೆ ಇರುವ ಕೇಂದ್ರವಾಗಿರುವುದರಿಂದ  ಸ್ಥಳೀಯ ಕಲೆ ಹಾಗೂ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ತುಳುನಾಡಿನ ಜನಪದವನ್ನು ಅರ್ಥಮಾಡಿಕೊಳ್ಳುವ ಮೂಲಕ ಇಡೀ ಭಾರತೀಯ ಸಂಸ್ಕೃತಿಯನ್ನು ಅರಿತುಕೊಳ್ಳುವ ಪ್ರಯತ್ನವಾಗಿ ಈ ಆನ್‌ಲೈನ್ ಕೋರ್ಸ್‌ನ್ನು ಪ್ರಾರಂಭಿಸಲಾಗುತ್ತಿದೆ.

ಸಮಕಾಲೀನ ಸಂದರ್ಭದಲ್ಲಿ ತುಳು ಜನಪದರ ಜೀವನದ ಅವಿಭಾಜ್ಯ ಅಂಗಗಳಿಂತಿರುವ ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಮತ್ತು ಕಂಬಳ ಪ್ರಕಾರಗಳನ್ನು ಈ ಆನ್‌ಲೈನ್ ಕೋರ್ಸ್‌ನ ಮೊದಲ ಹಂತದಲ್ಲಿ ಅಧ್ಯಯನಕ್ಕೆ ಪರಿಗಣಿಸಲಾಗುತ್ತದೆ.

ಕಲೆಗಳ ಆರಾಧನಾ ಹಾಗೂ ಮನೋರಂಜನಾತ್ಮಕ ಅಶಯಗಳ ನಡುವಿನ ಸಂಬಂಧಗಳನ್ನು ಶೈಕ್ಷಣಿಕ ನೆಲೆಯಲ್ಲಿ ವಿಶ್ಲೇಷಿಸುವ ಆನ್‌ಲೈನ್ ಕೋರ್ಸ್‌ನಲ್ಲಿ ಆಕರ್ಷಕ ವೀಡಿಯೋ ಸಾಕ್ಷ್ಯಚಿತ್ರಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ವಿವಿಧ ಪ್ರಕಾರ ಕಲೆಗಳ ಹಿರಿಯ ಕಲಾವಿದರ ಅನುಭವಗಳ ದಾಖಲೆಗಳಿವೆ. ವಿಷಯ ತಜ್ಞರ ಉಪನ್ಯಾಸಗಳ ಸಂಗ್ರಹವಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಉಡುಪಿಯ ಆಸುಪಾಸಿನಲ್ಲಿ ಸಾಮಾನ್ಯವಾಗಿರುವ ಹುಲಿವೇಷ ಕುಣಿತದ ಪ್ರದರ್ಶನವನ್ನು ಇಂದು ವಿಶ್ವವಿಖ್ಯಾತ ಶೈಕ್ಷಣಿಕ ಕೇಂದ್ರವಾಗಿರುವ ಮಣಿಪಾಲದಲ್ಲಿ ನಾಳೆ ಆಯೋಜಿಸಲಾಗಿದೆ.
‘ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಆನ್‌ಲೈನ್ ಕೋರ್ಸ್‌ನಲ್ಲಿ ಭಾಗವಹಿಸಲಿಚ್ಛಿಸು ವವರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Dr Praveen Shetty,  Coordinator

Centre for Intercultural Studies and Dialogue

Manipal Academy of Higher Education (MAHE)

Manipal 576104

Phone: +91 9481578358

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News