​ಮರಳು ಅಕ್ರಮ ಸಾಗಾಟ ಆರೋಪ: ಓರ್ವ ಸೆರೆ

Update: 2022-08-17 16:52 GMT

ಮಂಗಳೂರು : ಅಡ್ಯಾರ್ ಕಣ್ಣೂರು ಪರಿಸರದಿಂದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಟಿಪ್ಪರ್ ಲಾರಿಯ ಚಾಲಕನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪೊಲೀಸ್ ನಿರೀಕ್ಷಕ ಎಸ್.ಎಚ್.ಭಜಂತ್ರಿ ಬೆಳಗ್ಗೆ ೭ಕ್ಕೆ ಗಸ್ತು ನಿರತರಾಗಿದ್ದಾಗ ಕಣ್ಣೂರು ಕಡೆಯಿಂದ ಪಡೀಲ್ ಕಡೆಗೆ ಮರಳನ್ನು ಅಕ್ರಮವಾಗಿ ಟಿಪ್ಪರ್ ಲಾರಿಯಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು ಎನ್ನಲಾಗಿದೆ.  ಅದರಂತೆ ಪಡೀಲ್ ಓವರ್ ಬ್ರಿಡ್ಜ್ ಬಳಿ ಮಿನಿ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿದಾಗ ಚಾಲಕ/ಮಾಲಕ ಅಫಾವುಲ್ಲಾ ಯಾನೆ ಅಪ್ಪು ಎಂಬಾತ ಯಾವುದೇ ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಟಿಪ್ಪರ್ ಲಾರಿ ಹಾಗೂ ಮರಳು ಸಹಿತ ಅಂದಾಜು 4.07 ಲ.ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News