ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಯುಎಇ- ಜಪಾನ್ ಪ್ರತಿಜ್ಞೆ

Update: 2022-08-18 17:02 GMT

ಟೋಕಿಯೊ, ಆ.18: ಯುಎಇ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಬಾಂಧವ್ಯದ 50ನೇ ವರ್ಷಾಚರಣೆ ಸಂದರ್ಭ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಉಭಯ ದೇಶಗಳ ಹಿರಿಯ ಮುಖಂಡರು ಪ್ರತಿಜ್ಞೆ ಮಾಡಿದ್ದಾರೆ.

ಜಪಾನ್ಗೆ ಯುಎಇಯ ವಿಶೇಷ ಪ್ರತಿನಿಧಿ, ಯುಎಇಯ ಕೈಗಾರಿಕೆ ಮತ್ತು ಉನ್ನತ ತಂತ್ರಜ್ಞಾನ ಸಚಿವ ಸುಲ್ತಾನ್ ಅಲ್ಜಬೆರ್ ಗುರುವಾರ ಜಪಾನ್ನ ವಿದೇಶಾಂಗ ಸಚಿವ ಹಯಾಶಿ ಯೊಷಿಮಸರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ಸಹಕಾರ ಸಂಬಂಧವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News