×
Ad

ರಾಜ್ಯಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ; ಉಡುಪಿಯ ವಿಬಿಸಿಎಲ್‌ಗೆ ರನ್ನರ್‌ಅಪ್ ಪ್ರಶಸ್ತಿ

Update: 2022-08-19 21:51 IST

ಉಡುಪಿ: ಮೈಸೂರು ವಿಶ್ವವಿದ್ಯಾನಿಲಯ ಕಾನೂನು ಶಾಲೆ ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಮೊದಲ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ರನ್ನರ್ ಅಪ್ ಸ್ಥಾನ ಗೆದ್ದುಕೊಂಡಿದ್ದಾರೆ.

ಒಟ್ಟು 26 ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ  ಇಂದಿರೇಶ್ ಮತ್ತು ಇತರ ತೀರ್ಪುಗಾರರು ಅಂತಿಮವಾಗಿ ವಿಜೇತರನ್ನು ನಿರ್ಧರಿಸಿದರು.

ಈ ಸ್ಪರ್ಧೆಯಲ್ಲಿ ವಿಬಿಸಿಎಲ್‌ನ ವಿದ್ಯಾರ್ಥಿಗಳಾದ  ಉದಯಕುಮಾರ್ ಎನ್.ಜೆ ಮತ್ತು ಐಶ್ವರ್ಯ ಎನ್.ಪಿ ಮಂಡನಕಾರರಾಗಿಯೂ ಹಾಗೂ ಸಂಶೋಧಕರಾಗಿ ನಯನ ಶೆಟ್ಟಿ ಭಾಗವಹಿಸಿ ಎರಡನೇ ಸ್ಥಾನ ಪಡೆಯುವ ಮೂಲಕ ರನ್ನರ್ ಅಫ್ ಪ್ರಶಸ್ತಿ ಗೆದ್ದುಕೊಂಡರು.

ಚಿತ್ರದಲ್ಲಿ ಕಾಲೇಜಿನ ವಿಜೇತ ತಂಡದೊಂದಿಗೆ ಪ್ರಾಂಶುಪಾಲರಾದ ಪ್ರೊ. (ಡಾ.) ನಿರ್ಮಲಾಕುಮಾರಿ ಕೆ., ಐಕ್ಯೂಎಸಿ ಸಂಯೋಜಕ ರಘುನಾಥ್ ಕೆ.ಎಸ್ ಹಾಗೂ ಅಣಕು ನ್ಯಾಯಾಲಯದ ಸಂಯೋಜಕ ಡಾ. ನವೀನಚಂದ್ರ ಸಿ.ಬಿ ಇದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News