911 ಸಂಖ್ಯೆಗೆ 12,‌512 ಬಾರಿ ಕರೆ ಮಾಡಿದ ಮಹಿಳೆಯ ಬಂಧನ

Update: 2022-08-19 16:35 GMT

ಟ್ಯಾಲಹ್ಯಾಸಿ (ಅಮೆರಿಕ), ಆ. 19: ಈ ವರ್ಷ ಪೊಲೀಸರಿಗೆ ಬರೋಬ್ಬರಿ 12,512 ಬಾರಿ ಟೆಲಿಫೋನ್ ಕರೆಗಳನ್ನು ಮಾಡಿರುವ ಫ್ಲೋರಿಡ ರಾಜ್ಯದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ.

ಕಾರ್ಲಾ ಜೆಫರ್ಸನ್ ಎಂಬ 51 ವರ್ಷದ ಮಹಿಳೆಯು ಸೇಂಟ್ ಪೀಟರ್ಸ್ಬರ್ಗ್ ಪೊಲೀಸ್ ಇಲಾಖೆ ಮತ್ತು ಪಿನೆಲಸ್ ಕೌಂಟಿ ಶೆರೀಫ್ ಕಚೇರಿಯ ತುರ್ತು ಉದ್ದೇಶಕ್ಕಲ್ಲದ ಫೋನ್ಗಳಿಗೆ ಕರೆ ಮಾಡುತ್ತಾರೆ ಹಾಗೂ ‘‘ಫೋನ್ ತೆಗೆಯುವವರನ್ನು ಪೀಡಿಸುತ್ತಾರೆ, ತೆಗಳುತ್ತಾರೆ, ಅವರ ಮೇಲೆಆಣೆ ಮಾಡುತ್ತಾರೆ ಮತ್ತು ಅವರೊಂದಿಗೆ ವಾದ ಮಾಡುತ್ತಾರೆ’’ ಎಂಬುದಾಗಿ ಮಹಿಳೆಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ದೂರಿನಲ್ಲಿ ಹೇಳಲಾಗಿದೆ ಎಂದು ಪತ್ರಿಕೆ ಹೇಳಿದೆ.

ಸೇಂಟ್ ಪೀಟರ್ಸ್ಬರ್ಗ್ ಪೊಲೀಸ್ ಇಲಾಖೆಗೆ ಆ ಮಹಿಳೆಯು ಮಾಡಿರುವ ಫೋನ್ ಕರೆಗಳ ಸಂಖ್ಯೆ ಇಲಾಖೆಗೆ ಬಂದಿರುವ ಒಟ್ಟು ಕರೆಗಳ 10 ಶೇಕಡವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ತಿಂಗಳು ಕಾರ್ಲಾ ಜೆಫರ್ಸನ್ 24 ಗಂಟೆಗಳ ಅವಧಿಯಲ್ಲಿ 512 ಬಾರಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಕರೆಗಳು ‘‘ಅಶ್ಲೀಲ, ಬೆದರಿಕೆಪೂರಿತ ಅಥವಾ ಕೊಳಕು’’ ಎಂಬುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದಾವಿತ್ ಒಂದರಲ್ಲಿ ಪೊಲೀಸರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News