ಆರ್ಥಿಕ ಸಂಕಷ್ಟ: ಶ್ರೀಲಂಕಾ ಬಳಿಕ ಭೂತಾನ್ ಸರದಿ

Update: 2022-08-20 02:13 GMT
ಸಾಂದರ್ಭಿಕ ಚಿತ್ರ (Credit: earth.org)

ಕಠ್ಮಂಡು: ತೀವ್ರ ಆರ್ಥಿಕ ಸಂಕಷ್ಟ(Economic Crisis)ಕ್ಕೆ ಸಿಲುಕಿರುವ ಭೂತಾನ್(Bhutan) ಇದೀಗ ಬಳಕೆ ವಾಹನಗಳು, ಭಾರಿ ಅರ್ಥ್‍ಮೂವಿಂಗ್ ಮೆಷಿನ್‍ಗಳು ಮತ್ತು ಕೃಷಿ ಯಂತ್ರೋಪಕರಣಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳ ಆಮದಿ(import)ನ ಮೇಲೆ ನಿಷೇಧ ಹೇರಿದೆ. ದೇಶದಲ್ಲಿ ವಿದೇಶಿ ವಿನಿಮಯ ದಾಸ್ತಾನು ಬರಿದಾಗುತ್ತಿರುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದೆ.

ಚೀನಾ ಹಾಗೂ ಭಾರತದ ನಡುವೆ ಇರುವ ಈ ಪುಟ್ಟ ರಾಷ್ಟ್ರ 8 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದೆ. ಉಕ್ರೇನ್ ಯುದ್ಧದ ಕಾರಣದಿಂದ ತೈಲ ಮತ್ತು ಆಹಾರ ಧಾನ್ಯದ ಬೆಲೆ ಹೆಚ್ಚುತ್ತಿರುವುದು ಹಾಗೂ ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಸಂಕಷ್ಟಕ್ಕೆ ಮೂಲ. ಕೋವಿಡ್ ಕಾರಣದಿಂದ ಕೋವಿಡ್ ಶೂನ್ಯ ನೀತಿಯಡಿ ಎರಡು ವರ್ಷಗಳ ಅವಧಿಗೆ ಎಲ್ಲ ವಿದೇಶಿ ಪ್ರವಾಸಿಗರಿಗೆ ಭೂತಾನ್ ನಿಷೇಧ ಹೇರಿತ್ತು.

ವಾರ್ತಾಭಾರತಿಯ ನ್ಯೂಸ್ ಅಪ್ಡೇಟ್ಸ್ ನಿಮ್ಮ ವಾಟ್ಸ್ ಆಪ್ ಗೆ  ತಲುಪಬೇಕೇ ? ಈ ಲಿಂಕ್ https://bit.ly/3Cd3adz ಕ್ಲಿಕ್ ಮಾಡಿ ನಮ್ಮ ಗ್ರೂಪ್ Join ಆಗಿ.

ಭೂತಾನ್‍ನ ವಿದೇಶಿ ವಿನಿಮಯ ದಾಸ್ತಾನು 2021ರ ಡಿಸೆಂಬರ್ ನಲ್ಲಿ 970 ದಶಲಕ್ಷ ಡಾಲರ್ ಗೆ ಕುಸಿದಿದೆ. 2021ರ ಏಪ್ರಿಲ್‍ನಲಿ ಇದು 1.46 ಶತಕೋಟಿ ಡಾಲರ್ ಆಗಿತ್ತು ಎಂದು ರಾಯಲ್ ಮಾನಿಟರಿ ಅಥಾರಿಟಿ ಆಫ್ ಭೂತಾನ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಪ್ರವಾಸೋದ್ಯಮಕ್ಕೆ ಬಳಸುವ 20 ಸಾವಿರ ಡಾಲರ್‍ಗಿಂತ ಕಡಿಮೆ ಮೌಲ್ಯದ ಬಳಕೆ ವಾಹನಗಳ ಆಮದಿಗೆ ಮಾತ್ರ ಹಣಕಾಸು ಸಚಿವಾಲಯ ವಿನಾಯ್ತಿ ನೀಡಿದೆ. 

ಭೂತಾನ್‍ನ ಸಂವಿಧಾನದ ಪ್ರಕಾರ, ದೇಶ ಕನಿಷ್ಠ 12 ತಿಂಗಳುಗಳ ಆಮದಿಗೆ ಬೇಕಾಗುವಷ್ಟು ವಿದೇಶಿ ವಿನಿಮಯ ದಾಸ್ತಾನು ಹೊಂದಿರಬೇಕಾಗುತ್ತದೆ. ದೇಶದ ಆರ್ಥಿಕತೆಯ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ವಿದೇಶಿ ವಿನಿಮಯ ದಾಸ್ತಾನು ನಿರ್ವಹಿಸುವುದನ್ನು ಖಾತರಿಪಡಿಸಲು ನಿಷೇಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಟ್ರ್ಯಾಕ್ಟರ್- ಲಾರಿ ಢಿಕ್ಕಿ: 6 ಮಂದಿ ಸಾವು, 20 ಮಂದಿಗೆ ಗಾಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News