×
Ad

ಮಂಗಳೂರು: ಮೀನು ಹಿಡಿಯಲು ಸಮುದ್ರಕ್ಕೆ ಇಳಿದಿದ್ದ ಯುವಕ ನೀರುಪಾಲು

Update: 2022-08-20 08:39 IST
ಮುಹಮ್ಮದ್ ಕೈಫ್

ಮಂಗಳೂರು: ಸಮುದ್ರದಲ್ಲಿ ಯುವಕನೋರ್ವ ನೀರುಪಾಲಾಗಿರುವ ಘಟನೆ ನಗರದ ಹೊರವಲಯದ ತಣ್ಣೀರು ಬಾವಿ ಕಡಲ‌ ಕಿನಾರೆಯಲ್ಲಿ ಶುಕ್ರವಾರ ಮಧ್ಯಾಹ್ನ‌‌ ನಡೆದಿದೆ.

ಮೃತ ಯುವಕನನ್ನು ತಣ್ಣೀರುಬಾವಿ ನಿವಾಸಿ ಮುಹಮ್ಮದ್ ಕೈಫ್(19) ಎಂದು ತಿಳಿದು ಬಂದಿದೆ.

ಮುಹಮ್ಮದ್ ಕೈಫ್ ಶುಕ್ರವಾರ ಮಧ್ಯಾಹ್ನ ಮನೆಯ ಸಮೀಪದ ತಣ್ಣೀರುಬಾವಿ ಕಡಲಿನಲ್ಲಿ ಮೀನು ಹಿಡಿಯಲು ಹೋಗಿದ್ದು, ಸಮುದ್ರದ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಕುಟುಂಬಸ್ಥರು ಹಾಗೂ ಸ್ಥಳೀಯರು ಈತನ‌ ಹುಡುಕಾಟದಲ್ಲಿ ತೊಡಗಿದ್ದು, ಕೈಫ್ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ವಾರ್ತಾಭಾರತಿಯ ನ್ಯೂಸ್ ಅಪ್ಡೇಟ್ಸ್ ನಿಮ್ಮ ವಾಟ್ಸ್ ಆಪ್ ಗೆ  ತಲುಪಬೇಕೇ ? ಈ ಲಿಂಕ್ https://bit.ly/3Cd3adz ಕ್ಲಿಕ್ ಮಾಡಿ ನಮ್ಮ ಗ್ರೂಪ್ Join ಆಗಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News